ಬೆಂಗಳೂರು: ಸ್ಯಾಂಡಲ್ವುಡ್ ನಟ ಧನ್ವೀರ್ ತನ್ನ ಆಪ್ತ ದರ್ಶನ್ ಬಗ್ಗೆ ಆಡಿರುವ ಮಾತುಗಳು ಭಾರೀ ವೈರಲ್ ಆಗಿದೆ. ಆ ಮೂಲಕ ಮತ್ತೊಮ್ಮೆ ʼಡಿಬಾಸ್ʼ ವಿರೋಧಿಗಳಿಗೆ ಸ್ಯಾಂಡಲ್ವುಡ್ ನಟ ಟಾಂಗ್ ನೀಡಿದ್ದಾರೆ.
ಚಾಮರಾಜನಗರ ದಸರಾದಲ್ಲಿ ಡಿಬಾಸ್ ಡಿಬಾಸ್ ಎಂದು ಅಭಿಮಾನಿಗಳು ಕೂಗಾಡಿದ್ದಾರೆ. ಈ ವೇಳೆ ವೇದಿಕೆಯಲ್ಲಿದ್ದ ಧನ್ವೀರ್ ಗೌಡ, ʼ‘ಏನೇ ಕುತಂತ್ರಗಳು ನಡೆದರೂ ಹಾಗೂ ನಾಯಿ-ನರಿಗಳು ಏನೇ ಮಾಡಿದರು ಆ ಯಪ್ಪನನ್ನು ಏನು ಮಾಡಲು ಸಾಧ್ಯವಿಲ್ಲ. ದರ್ಶನ್ ಖಂಡಿತವಾಗಿ ಶೀಘ್ರದಲ್ಲೇ ಹೊರಗೆ ಬರಲಿದ್ದಾರೆ’ʼ ಎಂದಿದ್ದಾರೆ.
ಇದನ್ನು ಕೇಳಿ ಅಲ್ಲಿದ್ದ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ. ಆದರೆ ಒಂದು ಕಡೆ ಅಭಿಮಾನಿಗಳು ಧನ್ವೀರ್ ಅವರ ಮಾತುಗಳನ್ನು ಕೇಳಿ ಖುಷ್ ಆಗಿದ್ದು, ಇನ್ನೊಂದು ಕಡೆ ದಸರಾ ದಂತಹ ವೇದಿಕೆಯನ್ನು ಇಂತಹ ವಿಚಾರಗಳಿಗೆ ಬಳಸಿಕೊಂಡಿರುರುವುದು ಸರಿಯಲ್ಲ ಎಂದು ಕೆಲವರು ಕಿಡಿಕಾರಿದ್ದಾರೆ ಎಂದು ವರದಿಯಾಗಿದೆ.














