ಪುತ್ತೂರು : ಇಲ್ಲಿನ ಶಾರದಾ ಭಜನಾ ಮಂದಿರದ ಆಶ್ರಯದಲ್ಲಿ ನಡೆದಿದ್ದ ಪುತ್ತೂರು ದಸರಾ ಅಭೂತಪೂರ್ವ ಯಶಸ್ಸಿನೊಂದಿಗೆ ಸಂಪನ್ನಗೊಂಡಿದೆ.
ಈ ನಿಟ್ಟಿಲ್ಲಿ ಕೃತಜ್ಞತಾ ಸಭೆ ಹಾಗೂ ಸಹಭೋಜನ ಅ. 23ರಂದು ಸಂಜೆ ಶಾರದಾ ಭಜನಾ ಮಂದಿರದ ಆವರಣದಲ್ಲಿ ಸಮಿತಿಯ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಂದಿರದ ಪದಾಧಿಕಾರಿಗಳು, ಸದಸ್ಯರು, ಭಕ್ತರು ಭಾಗವಹಿಸಿದ್ದರು.
ಪುತ್ತೂರು ಇತಿಹಾಸದಲ್ಲೇ ಪ್ರಥಮ ಬಾರಿಗೆ ಡಿ.ಜೆ ಹಾಗೂ ಸಿಡಿಮದ್ದು ರಹಿತ ಉತ್ಸವವು ಭವ್ಯ ಶೋಭಾಯಾತ್ರೆಯೊಂದಿಗೆ ಸಾಗಿ ನಾಡಿನ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಭಕ್ತರು ಪುತ್ತೂರು ದಸರಾ ಹತ್ತೂರಿಗೆ ಮಾದರಿ. ಶಿಸ್ತು ಮತ್ತು ಸಮಯಪಾಲನೆಯ ದಸರಾವೆಂದರೆ ಅದು ಪುತ್ತೂರು ದಸರಾ. ಮುಂದೆ ಪುತ್ತೂರಿನಲ್ಲಿ ನಡೆಯುವ ಧಾರ್ಮಿಕ ಉತ್ಸವಕ್ಕೆ ಈ ಬಾರಿಯ ಶಾರದ ಶೋಭಾಯಾತ್ರೆಯೇ ಸಾಕ್ಷಿ ಎಂದು ಮಾಧ್ಯಮದ ಮುಂದೆ ಭಕ್ತರು ಸಂತಸ ವ್ಯಕ್ತಪಡಿಸಿದರು.














