ಭಕ್ತಿಯಿಂದ ಮಾತ್ರ ಭಗವಂತನನ್ನು ಕಾಣಲು ಸಾಧ್ಯ!! ದೇವರನ್ನು ನಂಬುತ್ತೇನೆಂದ ಸಿದ್ದರಾಮಯ್ಯ!!

ಮೈಸೂರು: ‘ನಾನು ಮೌಢ್ಯಗಳನ್ನು ನಂಬುವುದಿಲ್ಲ. ಆದರೆ, ದೇವರನ್ನು ನಂಬುತ್ತೇನೆ. ಭಕ್ತಿಯಿಂದ ಮಾತ್ರ ಭಗವಂತನನ್ನು ಕಾಣಲು ಸಾಧ್ಯ’ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಹೇಳಿದರು. ಸ್ವಕ್ಷೇತ್ರ ವರುಣ ವ್ಯಾಪ್ತಿಯ ಮೈಸೂರು ತಾಲ್ಲೂಕಿನ ರಂಗನಾಥಪುರ ಗ್ರಾಮದಲ್ಲಿ ಶುಕ್ರವಾರ ಗ್ರಾಮದೇವತೆ ದಂಡಿನಮಾರಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆಯ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೌಢ್ಯವೆಂದರೆ ನಂ ಬಿಕೆಯಲ್ಲಿ ಅಪನಂಬಿಕೆ. ಅದನ್ನು ಹಿಂದಿನಿಂದ ಆಚರಿಸಿಕೊಂಡು ಬಂದಿದ್ದೇವೆ. ಜನತೆ ದೇವರನ್ನು ನಂಬಬೇಕು ಆದರೆ ಮೂಢನಂಬಿಕೆಗಳನ್ನು ತ್ಯಜಿಸಬೇಕು’ ಎಂದರು. ‘ನಾನು ದೇವರನ್ನು ವಿರೋಧಿಸುವುದಿಲ್ಲ ಅಥವಾ ನಾಸ್ತಿಕನಲ್ಲ. ದೇವರು ಎಲ್ಲ ಕಡೆಯೂ ಇದ್ದಾನೆ ಎಂಬುದನ್ನು ನಂಬುತ್ತೇನೆ’ ಎಂದು ಹೇಳಿದರು.

Advertisement

‘ಗ್ರಾಮಸ್ಥರು ದಂಡಿನಮಾರಮ್ಮ ದೇವಸ್ಥಾನವನ್ನು ಪುನರ್ ನಿರ್ಮಿಸಿಕೊಡುವಂತೆ ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು. ಆದ್ದರಿಂದ ನಾನು ಸಂತೋಷದಿಂದ ಬಂದು ಉದ್ಘಾಟಿಸಿದ್ದೇನೆ. ಗ್ರಾಮಗಳಲ್ಲಿ ದೇವಸ್ಥಾನಗಳು ಇರಬೇಕು. ಆದರೆ, ಜನರಲ್ಲಿ ಭಕ್ತಿ ಭಾವನೆ ಇದ್ದರೆ ಮಾತ್ರ ದೇವರು ಇರುತ್ತಾನೆ. ಜನರು ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿಕೊಡುತ್ತಾರೆ. ಮೊದಲು ಆ ಮೂಢನಂಬಿಕೆಯನ್ನು ಬಿಡಬೇಕು’ ಎಂದರು. ‘ಇತರರನ್ನು ಸಹೋದರರಂತೆ ಕಾಣಬೇಕು. ಆಗಮಾತ್ರ ದೇವರು ಎಲ್ಲರನ್ನೂ ನಂಬುತ್ತಾನೆ. ಹೀಗಿದ್ದಲ್ಲಿ ಗ್ರಾಮಗಳ ಜನರು ಒಗ್ಗಟ್ಟಾಗಿ ಬಾಳಿ ಬದುಕಲು ಸಾಧ್ಯವಾಗುತ್ತದೆ. ವರುಣಮಾದರಿ ಕ್ಷೇತ್ರವಾಗಲು ಎಲ್ಲರ ಗ್ರಾಮಗಳಲ್ಲೂ ಒಗ್ಗಟ್ಟಿನಿಂದ ಬಾಳಬೇಕು. ಎಲ್ಲವೂ ಮಾದರಿ ಗ್ರಾಮವಾದರೆ, ರಾಜ್ಯವೂ ಮಾದರಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page