ಪಾಕಿಸ್ಥಾನ-ಇರಾನ್ ನಡುವಿನ ಗಡಿ ಮಾರ್ಗಗಳನ್ನು ಬಂದ್ ಮಾಡಲಾಗಿದ್ದು, ಪರಿಣಾಮವಾಗಿ ಪಾಕ್ನಲ್ಲಿ ಎಲ್ಪಿಜಿಗೆ ತೀವ್ರ ಅಭಾವ ಉಂಟಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ 4,500 ಪಾಕ್ ರೂ. ಇದ್ದ 12 ಕೆ.ಜಿ. ಸಿಲಿಂಡರ್, ಇದೀಗ ಬಲೂಚಿಸ್ಥಾನದಲ್ಲಿ 7,000 ರೂ. ಲಾಹೋರ್ನಲ್ಲಿ 8,200 ಪಾಕ್ ರೂ. ಆಗಿದೆ. ಪಾಕಿಸ್ಥಾನವು ಇರಾನ್ನಿಂದ ಶೇ.70ರಷ್ಟು ಎಲ್ಪಿಜಿಯನ್ನು ಆಮದು ಮಾಡಿಕೊಳ್ಳುತ್ತದೆ. ಅದು ಗಬ್ದ್-ರಿಮ್ದಾನ್ ಹಾಗೂ ತಫ್ತಾನ್ ಗಡಿಗಳ ಮೂಲಕ ಪಾಕ್ಗೆ ತಲುಪುತ್ತವೆ. ಪ್ರತಿನಿತ್ಯ ಇರಾನ್ನಿಂದ ಪಾಕ್ ಸುಮಾರು 7,000 ಟನ್ ಎಲ್ಪಿಜಿ ಆಮದು ಮಾಡಿಕೊಳ್ಳುತ್ತದೆ ಎಂದು ಮೂಲಗಳು ಹೇಳಿದೆ.














