ಕುಕ್ಕೆ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆಯ ದಿಟ್ಟಂ ಬದಲಾವಣೆಗೆ ತೀವ್ರ ವಿರೋಧ! ಭಕ್ತರೊಂದಿಗೆ ಸೇರಿ ಹೋರಾಟದ ಎಚ್ಚರಿಕೆ ನೀಡಿದ ಪ್ರಸನ್ನ ದರ್ಬೆ!!

ತುಳುನಾಡಲ್ಲಿ ಬಲಿ ಅಂದರೆ ದೇವರ ಆರಾಧನೆ. ನಾಗನ ಸಾನಿಧ್ಯ ಇರುವ ಜಾಗದಲ್ಲಿ ಈ ಆಶ್ಲೇಷ ಬಲಿ ಪೂಜೆಯನ್ನು ಮಾಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಪೂಜೆಯನ್ನು ಮಾಡಲು ಹಲವು ಕಾರಣಗಳಿವೆ. ಈ ಜನ್ಮದಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಹಾವು ಕೊಂದಿದ್ದರೆ, ಹಾವಿನ ಮೊಟ್ಟೆ ಒಡೆದಿದ್ದರೆ, ಹುತ್ತ ಒಡೆದಿದ್ದರೆ ಸರ್ಪ ದೋಷ ಬರುತ್ತದೆ. ಮನೆ ಕಟ್ಟುವಾಗ ನಾಗನ ಸ್ಥಾನಕ್ಕೆ ತೊಂದರೆ ಆಗಿದ್ದರೆ ನಾಗ ದೋಷ ಬರುತ್ತದೆ. ಜಾತಕದಲ್ಲಿ ಎಲ್ಲಾ ಗ್ರಹಗಳು ರಾಹು-ಕೇತು ಮಧ್ಯೆ ಸಿಕ್ಕಿಕೊಂಡಿದ್ದರೆ ಕಾಲ ಸರ್ಪ ದೋಷ ಬರುತ್ತದೆ. ಮದುವೆ ಆಗದೇ ಅಥವಾ ಮದುವೆ ತಡ ಆಗುತ್ತಿದ್ದರೆ ಕುಜ ದೋಷ / ಮಂಗಳ ದೋಷ ಇರುತ್ತದೆ. ಮಕ್ಕಳು ಆಗದೇ, ಗರ್ಭ ನಿಲ್ಲದೇ ಇದ್ದರೆ ಸಂತಾನ ದೋಷ ಇರುತ್ತದೆ. ಹಾವಿಗೆ ತೊಂದರೆ ಮಾಡಿ ಚರ್ಮ ರೋಗ ಬಂದಿದ್ದರೆ – ಈ ಎಲ್ಲಾ ಕಾರಣಗಳಿಗೆ ಜ್ಯೋತಿಷಿಗಳು ಈ ಪೂಜೆಯನ್ನು ಮಾಡಲು ಹೇಳುತ್ತಾರೆ.

Advertisement

ಇಲ್ಲಿ ಅರ್ಚಕರು ಪ್ರತಿ ನಾಗಗಳಿಗೂ ಅದರ ಹೆಸರನ್ನು ಹೇಳುತ್ತಾ ಬಲಿ ನೀಡಿ ಸಂತೃಪ್ತಿ ಕೊಡುತ್ತಾರೆ. ಈ ಪೂಜೆ ಮಾಡಿಸುವಾಗ ಪ್ರತ್ಯೇಕ ಸಂಕಲ್ಪ ಅತ್ಯಗತ್ಯ. ಯಾಕೆಂದರೆ ಪ್ರತಿಯೊಬ್ಬರಿಗೂ ಬೇರೆ ಬೇರೆ ಕಾರಣಗಳಿರುತ್ತವೆ. ಒಬ್ಬರಿಗೆ ಮದುವೆ ಆಗಬೇಕು, ಇನ್ನೊಬ್ಬರಿಗೆ ಮಕ್ಕಳು ಆಗಬೇಕು, ಮತ್ತೊಬ್ಬರಿಗೆ ಸರ್ಪ ದೋಷ ಹೋಗಬೇಕು. ಎಲ್ಲರಿಗೂ ಒಂದೇ ಸಂಕಲ್ಪ ಹೇಗೆ ಸಾಧ್ಯ? ಆದರೆ ಈವಾಗ ಕುಕ್ಕೆಯಲ್ಲಿ ಸಾಮೂಹಿಕ ಸಂಕಲ್ಪ ಶುರುವಾಗಿದೆ. ಕಾರಣ ಭಕ್ತರು ತುಂಬಾ ಬರ್ತಾರೆ, ವ್ಯವಸ್ಥೆ ಮಾಡಲು ಕಷ್ಟ ಎಂದು ಹೇಳುತ್ತಾರೆ. ಇದು ಹಿಂದಿನಿಂದ ಬಂದ ಪದ್ಧತಿ. ಯಾವನಿಗೋ ಅವನ ಇಷ್ಟದ ಪ್ರಕಾರ ದೇವಾಲಯದ ಪದ್ಧತಿಯನ್ನು ಬದಲಿಸಲು ಸಾಧ್ಯವಿಲ್ಲ.

Advertisement
Advertisement

ದೇವಾಲಯಕ್ಕೆ ಹಿಂದಿನಿಂದ ಬಂದ ದಿಟ್ಟಂ ಇದೆ. ದಿಟ್ಟಂ ಅಂದರೆ ಹಿಂದಿನಿಂದ ಬಂದಂತಹ, ಬರೆದಿಟ್ಟಿರುವಂತಹ ಪೂಜಾ ಪದ್ಧತಿಯ ರೀತಿ ರಿವಾಜು. ಅದನ್ನೆಲ್ಲ ಬಿಟ್ಟು ನಿಮಗೆ ಬೇಕಾದ ಹಾಗೆ ಬದಲಿಸಿಕೊಂಡು ಹೋಗಲು ದೇವಾಲಯ ಯಾರದ್ದೋ ಸ್ವಂತ ಆಸ್ತಿ ಅಲ್ಲ. ಅದು ಸಮಸ್ತ ಹಿಂದೂ ಧರ್ಮದ ಆಸ್ತಿ. ಇಲ್ಲಿ ಆಡಳಿತ ಮಾಡುವ ಅಧಿಕಾರಿಗಳೇ, ದೇವರು ಏನು ನಿಮ್ಮ ಅಧೀನದಲ್ಲಿ ಇರುವುದಲ್ಲ. ಆ ದೇವರ ಹಣದಲ್ಲಿ ಸಂಬಳ ಪಡೆಯುವವರು ನೀವು. ದೇವರಿಗೆ ಅದರದ್ದೇ ಆದ ರೀತಿಯಲ್ಲಿ ಪೂಜಾ ಪದ್ಧತಿಗಳು ನಡೆಯಲೇ ಬೇಕು. ಇದು ಎಲ್ಲಾ ಭಕ್ತರ ಒತ್ತಾಯ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯಾವ ರೀತಿಯ ನ್ಯಾಯಬದ್ಧ ಹೋರಾಟಕ್ಕೆ ಕೂಡ ತಯಾರಿದ್ದೇವೆ.

ಸಂಕಲ್ಪ ಮಾಡುವವರಿಂದ ತೊಂದರೆ ಇದ್ದರೆ ಬದಲಾಯಿಸಿ, ಅವರನ್ನು ಬೇಕಾದರೆ ಮನೆಗೆ ಕಳುಹಿಸಿ. ಅದು ಬಿಟ್ಟು ಸಂಕಲ್ಪವನ್ನೇ, ದೇವಾಲಯದ ಪದ್ಧತಿಯನ್ನೇ ವಿರೂಪ ಮಾಡಲು ನೀವು ಯಾರು?* ಸಂಕಲ್ಪ ಮಾಡುವವರು ಸರಿಯಿಲ್ಲ ಅಂದರೆ ಅವರನ್ನು ಬದಲಾಯಿಸಿ, ಪದ್ಧತಿಯನ್ನು ಬದಲಾಯಿಸಬೇಡಿ! ಈ ಸರಕಾರ ಬಂದಮೇಲೆ ಅಂತೂ ಹಿಂದೂ ದೇವಾಲಯವನ್ನು ದುಡ್ಡು ಮಾಡುವ ವ್ಯಾಪಾರ ಕೇಂದ್ರ ಅಂತ ತಿಳ್ಕೊಂಡ ಹಾಗೆ ಇದೆ. ದೇವಾಲಯದ ದುಡ್ಡಿನಲ್ಲಿ ದುಂದುವೆಚ್ಚ ಮಾಡುವುದನ್ನು ಬಿಟ್ಟು ದೇವಾಲಯದ ಅಗತ್ಯ ಏನಿದೆಯೋ, ಅಥವಾ ಭಕ್ತರಿಗೆ ಏನು ಬೇಕೋ ಅದನ್ನು ನೀಡಲು ಪ್ರಯತ್ನಿಸಿ.

ಭಕ್ತರ ಒತ್ತಾಯಗಳು ಈ ಕೆಳಗಿನಂತಿವೆ :

  • ಆಶ್ಲೇಷ ಬಲಿ ಪೂಜೆಯಲ್ಲಿ ಪ್ರತ್ಯೇಕ ಸಂಕಲ್ಪವನ್ನು ತಕ್ಷಣ ಮರು ಜಾರಿ ಮಾಡಬೇಕು.
  • ದೇವಾಲಯದ ದಿಟ್ಟಂಗೆ ವಿರುದ್ಧವಾದ ಸಾಮೂಹಿಕ ಸಂಕಲ್ಪ ಪದ್ಧತಿಯನ್ನು ಕೂಡಲೇ ಕೈಬಿಡಬೇಕು.
  • ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಪದ್ಧತಿಯನ್ನು ಬದಲಾಯಿಸಬಾರದು, ಬದಲಿಗೆ ವ್ಯವಸ್ಥೆಯನ್ನು ಹೆಚ್ಚು ಮಾಡಬೇಕು.
  • ದೇವಾಲಯದ ಹಣವನ್ನು ಭಕ್ತರ ಸೌಕರ್ಯಕ್ಕೆ, ದೇವಾಲಯದ ಅಭಿವೃದ್ಧಿಗೆ ಬಳಸಬೇಕು, ದುಂದುವೆಚ್ಚಕ್ಕೆ ಅಲ್ಲ.

ಇಲ್ಲದಿದ್ದರೆ ಭಕ್ತರೊಂದಿಗೆ ಸೇರಿ ನ್ಯಾಯಬದ್ಧ ಹೋರಾಟ ಮಾಡಲಾಗುವುದು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ ಹೇಳಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page