ನವದೆಹಲಿ: ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರವು ತಿದ್ದು ಪಡಿಗಳನ್ನು ತಂದಿದ್ದು, ಶೇ .100ರಷ್ಟು ಎಥೆನಾಲ್ ಬಳಸಿ ಚಲಿಸುವ ಇ100 ವಾಹನಗಳಿಗೆ ಸೋಮವಾರ ಅಧಿಕೃತವಾಗಿ ಅನುಮೋದನೆ ನೀಡಿದೆ. ಇದರಿಂದ ಇ20 ಮಾತ್ರವಲ್ಲದೇ ಇ85, ಇ100 ವಾಹನಗಳಿಗೆ ಅನುಮತಿ ಸಿಕ್ಕಂತಾಗಿದೆ.
ಈ ಬದಲಾವಣೆಗಳಿಂದ ವಾಹನಗಳ ಒಟ್ಟು ವಾಹನ ತೂಕದ ಮಿತಿಯನ್ನು 3,000 ಕೇಜಿಯಿಂದ 3,500 ಕೇಜಿಗೆ ಹೆಚ್ಚಿಸಿದೆ. ಇ20ಗಿಂತ ಹೆಚ್ಚಿನ ಮಟ್ಟದ ಎಥೆನಾಲ್ ಇಂಧನವು ಕೇವಲ ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿ, ಪ್ರಮಾಣೀಕರಿಸಲ್ಪಟ್ಟ ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿಸಿದೆ.














