ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್‌ ಯಾದವ್‌ ರಾಜೀನಾಮೆ ವದಂತಿ! ನಮ್ಮ ಮನಸ್ತಾಪಗಳನ್ನು ನಾವೇ ಸರಿಪಡಿಸುತ್ತೇವೆ!! ಹರಿಪ್ರಸಾದ್‌ ಯಾದವ್‌ ಸ್ಪಷ್ಟನೆ!!

ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್‌ ಯಾದವ್‌ ರಾಜೀನಾಮೆ ವದಂತಿ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ.

Advertisement

ರಾಜಿನಾಮೆ ವದಂತಿ ಕುರಿತು ಸ್ಪಷ್ಟನೆ ನೀಡಿದ ಹರಿಪ್ರಸಾದ್‌, ತಾನು ರಾಜೀನಾಮೆ ನೀಡುತ್ತೇನೆಂದು ಕೆಲವೊಂದು ಸಾಮಾಜಿಕ ಜಾಲತಾಣ ಮತ್ತು ವೆಬ್‌ ನ್ಯೂಸ್‌ಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ್ದೇನೆ. ನಾನು ಗ್ರಾಮಾಂತರ ಮಂಡಲದ ಉಪಾಧ್ಯಕ್ಷನಾಗಿ ಮುಂದುವರಿಯುತ್ತೇನೆ. ಭಾರತೀಯ ಜನತಾ ಪಾರ್ಟಿ ಹೇಳುವವರೆಗೂ ನಾನು ಈ ಸ್ಥಾನದಲ್ಲಿ ಮುಂದುವರಿಯುತ್ತೇನೆ. ನಿನ್ನೆ ನಡೆದ ಘಟನೆಯನ್ನು ಇಂದು ಬಂದು ಹಾಗೇನು ನಡೆದೇ ಇಲ್ಲ ಎನ್ನುವ ರಾಜಕೀಯ ವ್ಯಕ್ತಿ ನಾನಲ್ಲ. ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ಪಾರ್ಟಿ. ಇಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು, ಮನಸ್ತಾಪಗಳು ಬರುವುದು ಸಾಮಾನ್ಯ. ಆದರೆ ಇದನ್ನೆಲ್ಲಾ ಮಾತನಾಡಿ ಬಗೆಹರಿಸುವ ವೇದಿಕಯೂ ಪಾರ್ಟಿಯ ಒಳಗಿದೆ. ಆದರೆ ಇದನ್ನೇ ಭಿನ್ನಾಭಿಪ್ರಾಯ ಎಂಬ ವದಂತಿ ಹರಡಿರುವುದು ಬೇಸರ ತರಿಸಿದೆ. ಈ ನಿಟ್ಟಿನಲ್ಲಿ ಇಂತಹ ವದಂತಿಗಳಿಗೆ ಕಿವಿಗೊಡದಿರಿ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page