ಬೆಂಗಳೂರು : ಸ್ಟಿಂಗ್ ಆಪರೇಷನ್ ಗದ್ದಲದಿಂದ ಕಾಂಗ್ರೆಸ್ಗೆ ಡ್ಯಾಮೇಜ್ ಆಗ್ತಿದೆ ಎನ್ನುವ ಮಾತುಗಳು ಸಹ ಕೇಳಿ ಬರ್ತಿದೆ. ಇದರ ಎಫೆಕ್ಟ್ನಿಂದ 4 ಕ್ಷೇತ್ರಗಳ ಪರಿಷತ್ ಫೈಟ್ನಲ್ಲಿ ಕಾಂಗ್ರೆಸ್ಗೆ ಮುಖಭಂಗವಾಗಿದೆ ಎನ್ನುವ ಚರ್ಚೆ ಜೋರಾಗಿದೆ. ಇದೇ ವೇಳೆ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಗುಡುಗಿದ್ದು, ಪ್ರಜ್ವಲ್ ರೇವಣ್ಣ ಕೇಸ್ನನ್ನು ಎಳೆದು ತಂದಿದ್ದಾರೆ. ವಿಡಿಯೋ ಕೊಟ್ಟಿದ್ಯಾರು ಅನ್ನೋ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಚಲುವರಾಯಸ್ವಾಮಿ ಸವಾಲ್ ಎಸೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಮಾತಾಡಿದ ಸಚಿವ ಚಲುವರಾಯಸ್ವಾಮಿ ಅವ್ರು, ಸ್ಟಿಂಗ್ ಆಪರೇಷನ್ ವಿಚಾರ ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ, ಸ್ಟಿಂಗ್ ವಿಚಾರ ನಡೆಯುತ್ತಿರೋದು ಹೆಚ್.ಡಿ ಕುಮಾರಸ್ವಾಮಿ ಹಾಗೂ ಒಂದು ಖಾಸಗಿ ಮಾಧ್ಯಮದ ಮುಖ್ಯಸ್ಥನ ನಡುವೆ ಎಂದಿದ್ದಾರೆ. ಪ್ರಜ್ವಲ್ ರೇವಣ್ಣ ವಿಡಿಯೋ ತಂದು ಕೊಟ್ಟಿದ್ದೇ ಕುಮಾರಸ್ವಾಮಿ ಅಂತ ಮಾಧ್ಯಮ ಮುಖ್ಯಸ್ಥರೊಬ್ಬರೇ ಹೇಳಿದ್ದಾರೆ ಅಲ್ವಾ? ಇದರ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿಲ್ಲ ಯಾಕೆ ಎಂದು ಸಚಿವೆ ಚಲುವರಾಯಸ್ವಾಮಿ ಪ್ರಶ್ನೆ ಮಾಡಿದ್ದಾರೆ. ದೀಪಾವಳಿಯಿಂದ ನರಕಾಸುರನ ಪತನದ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಟ್ವೀಟ್ ಬಗ್ಗೆ ಮಾತಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ,ದಸರಾ ಟೈಮ್ ನಲ್ಲಿ ಅದೇನೋ ಅಲ್ಲೋಲ ಕಲ್ಲೋಲ ಅಂದ್ರು. ಇವಾಗ ದೀಪಾವಳಿಗೆ ಹೋಯ್ತಾ..? ನೆಕ್ಸ್ಟ್ ಕ್ರಿಸ್ ಮಸ್ಗೆ ಹೋಗುತ್ತೆ, ಆಮೇಲೆ ಹೊಸ ವರ್ಷಕ್ಕೆ, ಆಮೇಲೆ ಯುಗಾದಿ, ಹಾಗೇ ಮುಂದೆ ತಳ್ಕೊಂಡು ಹೋಗ್ತಿದ್ದಾರೆ. ನರಕಾಸರು ಯಾರು..? ಭಸ್ಮಾಸೂರ ಯಾರು? ಎಲ್ಲವೂ ಗೊತ್ತಾಗ್ತಾ ಇದೆ ಅಲ್ವಾ? ಎಲ್ಲಿ ಬಚ್ಚಿಟ್ಟಿದ್ದಾರಂತೆ ಆ ಮೂವರನ್ನು..? ಅದರ ಬಗ್ಗೆ ಕುಮಾರಸ್ವಾಮಿಯವರೇ ಹೇಳಿಕೆ ನೀಡ್ಬೇಕು. ಪಾರದರ್ಶಕವಾಗಿಯೇ ತನಿಖೆ ಆಗುತ್ತಿದೆ ವರದಿ ಆದಷ್ಟು ಬೇಗನೇ ಕೊಡೋಣ ಎಂದ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.














