ಕೊಯಿಲದಲ್ಲಿ ಮನೆಗೆ ಕಲ್ಲು ತೂರಾಟ ನಡೆಸಿ ಹಲ್ಲೆ ಪ್ರಕರಣ! ಪತಿ ಸೇರಿ 10 ಮಂದಿಯ ವಿರುದ್ಧ ನರ್ಸ್‌ ಪ್ರತಿದೂರು!!

ಕಡಬ: ಕೊಯಿಲ ಗ್ರಾಮದ ಸಬಳೂರಿನಲ್ಲಿ ಇತ್ತೀಚೆಗೆ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಅತ್ತೆ ನೀಲಮ್ಮ ಅವರ ತಲೆಗೆ ಗಾಯಗೊಳಿಸಿದ ಆರೋಪ ಎದುರಿಸುತ್ತಿದ್ದ ಸರ್ಕಾರಿ ಆಸ್ಪತ್ರೆಯ ನರ್ಸ್, ಇದೀಗ ತನ್ನ ಪತಿ ಪರಮೇಶ್ವರ, ಮಾವ ಪದ್ಮಯ್ಯ ಗೌಡ ಹಾಗೂ ಅತ್ತೆ ನೀಲಮ್ಮ ಸೇರಿದಂತೆ 10 ಮಂದಿ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ತನಗೆ ಮುಷ್ಟಿಯಿಂದ ಹಲ್ಲೆ ನಡೆಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಬಿಎನ್ಎಸ್ಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

Advertisement

ಕೊಯಿಲ ಗ್ರಾಮದ ಸಬಳೂರು ಸಂಕ್ರಾಂತಿ ಮನೆ ನಿವಾಸಿ ಮಂಗಳಾಬಾಯಿ ಅವರು ನೀಡಿರುವ ದೂರಿನ ಪ್ರಕಾರ, ಅವರು ಸುಮಾರು 22 ವರ್ಷಗಳ ಹಿಂದೆ ಕೊಯಿಲದ ಪದ್ಮಯ್ಯ ಗೌಡರ ಪುತ್ರ ಶಿಕ್ಷಕ ಪರಮೇಶ್ವರ ಎಸ್. ಅವರನ್ನು ವಿವಾಹವಾಗಿದ್ದರು. ಆದರೆ, ಆ.01.ಆ.06.ಆ. 08 ಹಾಗೂ ಅ.14 ರಂದು ತನಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಮುಖವಾಗಿ ಆ. 12ರಂದು ಸಂಜೆ ಮನೆಯಲ್ಲಿ ಪತಿ, ಮಾವ, ಅತ್ತೆ, ನಾದಿನಿ ಮತ್ತು ಆಕೆಯ ಪತಿ ಮಗ ತನ್ನ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ತೀವ್ರ ಮಾನಸಿಕ ಹಿಂಸೆ ನೀಡಿದ್ದಾರೆ. ಹಲ್ಲೆಯಿಂದ ಉಂಟಾದ ನೋವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾಗಿ ಹೇಳಿದ್ದಾರೆ.

Advertisement
Advertisement

ಇತ್ತೀಚಿನ ದಿನಗಳಲ್ಲಿ ಪತಿಯ ಅತ್ತೆ ಮಕ್ಕಳು ತನಗೆ ತೀವ್ರ ಮಾನಸಿನ ಹಾಗೂ ದೈಹಿಕ ತಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆಯಿಂದ ಉಂಟಾದ ದೈಹಿಕ-ಮಾನಸಿಕ ಆಘಾತ ಹಾಗೂ ಸೂಕ್ತ ತಾನೂನು ಅರಿವಿನ ಕೊರತೆಯಿಂದಾಗಿ ದೂರು ನೀಡಲು ತಡವಾಗಿದೆ ಎಂದು ತಿಳಿಸಿದ್ದಾರೆ.

ಮಂಗಳಾಬಾಯಿ ನೀಡಿದ ಲಿಖಿತ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 26ರಂದು ಸಂಜೆ ಅಪರಾಧ ಸಂಖ್ಯೆ: 122/2026 ದಲ್ಲಿ ಭಾರತೀಯ ನ್ಯಾಯ ಸಂಹಿತ (BNS) 2023ರ ಕಲಂ 85 (ವಿವಾಹಿತ ಮಹಿಳೆಗೆ ಪತಿ ಅಥವಾ ಸಂಬಂಧಿಕರಿಂದ ಕೌರ್ಯ), 115(2) (ಸ್ವಯಂಪ್ರೇರಿತವಾಗಿ ಗಾಯ ಉಂಟುಮಾಡುವುದು), 109(2) (ಕಾನೂನುಬಾಹಿರ ಕೂಟ ರಚನೆ) ಹಾಗೂ 191(2) (ದಂಗೆ/ಗಲಭೆ) ಅಡಿಯಲ್ಲಿ ಪ್ರತಿ ಪರಮೇಶ್ವರ (A1), ಮಾವ ಪದ್ಮಯ್ಯ ಗೌಡ (A2), ಆತ್ತೆ ನೀಲಮ್ಮ (A3], ನಾದನಿ ಚಂದ್ರಾವತಿ (A4), ಕೇಶವ (A5), ಪ್ರಥಮ್‌ (A5), .ಉಮೇಶ್ ಕುಂಡಡ್ಕ (AT), ಅವಿನಾಶ್ ಕುಂಡಡ್ಕ (AB), ಸುರೇಶ್ ಕುಂಡಡ್ಕ (49) ಹಾಗೂ ಇತರರ (A10) ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page