ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ವಿದುಷಿ ಕೃತಿ ಕೈಲಾರ್ ಡಿಸ್ಟಿಂಕ್ಷನ್! ಸಾಧನೆಯ ಹಾದಿಯಲಿ ಹೊಸ ಮೈಲಿಗಲ್ಲು!!

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ನಡೆಸುವ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಕೃತಿ ಕೈಲಾರ್ ಅವರು ಶೇ. 90% ಗಳಿಸಿ ವಿಶಿಷ್ಟ ಶ್ರೇಣಿಯನ್ನು ಪಡೆದು ತೇರ್ಗಡೆಯಾಗಿದ್ದಾರೆ. ಸುಮಾರು 17 ವರ್ಷಗಳ ಭರತನಾಟ್ಯ ಸಾಧನೆಯಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.

Advertisement

ಕೃತಿ ಅವರು ತಮ್ಮ ಭರತನಾಟ್ಯ ಕಲಿಕೆಯನ್ನು ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಅವರಲ್ಲಿ ಆರಂಭಿಸಿ, ನಂತರ ಮೈಸೂರಿನ ವಿದುಷಿ ಸುಹಾಸಿನಿ ಕೌಲಗಿ ಅವರ ಮಾರ್ಗದರ್ಶನದಲ್ಲಿ ಉನ್ನತ ಹಂತದ ತರಬೇತಿಯನ್ನು ಮುಂದುವರಿಸಿದ್ದಾರೆ. ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಅವರು, ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯ ಅಧ್ಯಯನ ಮತ್ತು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ದೂರದರ್ಶನದ ಗ್ರೇಡೆಡ್ ಕಲಾವಿದೆಯಾಗಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಿದ್ಯಾರ್ಥಿವೇತನವನ್ನೂ ಪಡೆದಿದ್ದಾರೆ.

Advertisement
Advertisement

ಕೃತಿ ಅವರು ಮೈಸೂರಿನ ಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದ್ದು, ಕಾನೂನು ಪದವಿಯಲ್ಲಿ ಐದನೇ ರ‍್ಯಾಂಕ್ ಗಳಿಸಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಭರತನಾಟ್ಯ ವಿಷಯದಲ್ಲಿ ಪ್ರದರ್ಶಕ ಕಲೆಗಳ ಸ್ನಾತಕೋತ್ತರ ಪದವಿ (ಎಂ.ಪಿ.ಎ.) ವ್ಯಾಸಂಗ ಮಾಡುತ್ತಿದ್ದಾರೆ. ಇವರು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಹಳೆಯ ವಿದ್ಯಾರ್ಥಿನಿ. ಇವರು ಕೈಲಾರ್ ರಾಜಗೋಪಾಲ ಭಟ್ ಮತ್ತು ಸತ್ಯೇಶ್ವರಿ ಕೆ. ಅವರ ಪುತ್ರಿ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page