ಅನ್ಯಧರ್ಮೀಯನ ಮೇಲೆ ಬಿಗ್‌ ಬಾಸ್‌ ಸ್ಪರ್ಧಿಗೆ ಪ್ರೀತಿ! ಮನೆಗೆ ಕರೆದೊಯ್ಯಲು ವಾರಂತ್ಯದ ಎಪಿಸೋಡ್‌ನಲ್ಲಿ ಬಂದ ಪೋಷಕರು!!

ಬಿಗ್‌ಬಾಸ್ ಮಲಯಾಳಂ 8ರ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಸ್ಪರ್ಧಿಯೊಬ್ಬರ ಪೋಷಕರು ಫ್ಯಾಮಿಲಿ ವೀಕ್‌ನಲ್ಲಿ ಅಲ್ಲದೆ, ವಾರಾಂತ್ಯದ ಎಪಿಸೋಡ್‌ನಲ್ಲೇ ವೇದಿಕೆಗೆ ಆಗಮಿಸಿ ತಮ್ಮ ಮಗಳನ್ನು ಮನೆಗೆ ಕರೆದೊಯ್ಯಲು ವಿನಂತಿಸಿದ್ದಾರೆ. ಮುಂಬರುವ ಸಂಚಿಕೆಯ ಪ್ರೋಮೋದಲ್ಲಿ, ನಿರೂಪಕ ಮೋಹನ್‌ಲಾಲ್ ಅವರು ಸ್ಪರ್ಧಿ ನೇಹಾ ಫಾತಿಮಾ ಅವರ ಪೋಷಕರನ್ನು ವೇದಿಕೆಗೆ ಆಹ್ವಾನಿಸುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ, ಕಣ್ಣೀರು ಹಾಕುತ್ತಾ ನೇಹಾ ಅವರ ತಂದೆ-ತಾಯಿ, ಮನೆ ಒಳಗೆ ಆಕೆ ಮಾಡುತ್ತಿರುವುದೇನು ಎಂದು ಪ್ರಶ್ನಿಸಿದ್ದಾರೆ ಎಂದು ಜಾಲತಾಣಗಳು ವರದಿ ಮಾದಿವೆ.

Advertisement

“ನೇಹಾ, ನಿನಗೆ ನಾವಿಬ್ಬರೂ ನೆನಪಿದ್ದೇವಾ? ನನಗಂತೂ ಹಾಗೆ ಅನಿಸುತ್ತಿಲ್ಲ,” ಎಂದು ನೇಹಾ ಅವರ ತಂದೆ ಆಕೆಯನ್ನು ಕೇಳಿದ್ದಾರೆ. ಮುಂದುವರಿದು ವಿಡಿಯೋದಲ್ಲಿ ನೇಹಾ ಅವರ ತಾಯಿ, “ನಾವು ಆಡಬೇಡ ಎಂದು ಹೇಳಿದ್ದ ಆಟವನ್ನೇ ಆಡುತ್ತಿದ್ದೀಯಾ” ಎಂದು ಕಣ್ಣೀರಿಡುತ್ತಾ ಪ್ರಶ್ನಿಸಿದ್ದಾರೆ. “ಎಲ್ಲರೂ ಅಲ್ಲಿ ಅವರವರ ಆಟ ಆಡುತ್ತಿದ್ದಾರೆ. ಆದರೆ ನೀನು ಭಾವನೆಗಳಿಗೆ ಅಂಟಿಕೊಂಡಿದ್ದೀಯಾ. ನಿನ್ನನ್ನು ಅಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ನಾವು ಆಡಬೇಡ ಎಂದಿದ್ದ ಆಟವನ್ನೇ ನೀನು ಆಡುತ್ತಿದ್ದೀಯಾ. ನೀನೊಂದು ನಿರೀಕ್ಷೆಯನ್ನಿಟ್ಟುಕೊಂಡಿದ್ದೀಯಾ ಅಲ್ವೇ? ಅದರಿಂದ ಆಗುತ್ತಿರುವ ನೋವನ್ನು ನಾನಿಲ್ಲಿ ಶೇ.100 ಕ್ಕಿಂತಲೂ ಹೆಚ್ಚಾಗಿ ಅನುಭವಿಸುತ್ತಿದ್ದೇನೆ,” ಎಂದು ನೇಹಾ ಅವರ ತಾಯಿ ಗಳಗಳನೆ ಅತ್ತಿದ್ದಾರೆ.

Advertisement
Advertisement

ಕೊನೆಯಲ್ಲಿ ನಿರೂಪಕ ಮೋಹನ್‌ಲಾಲ್ ಅವರು, ನೇಹಾ ಅವರ ಪೋಷಕರು ಆಕೆಯನ್ನು ಮನೆಗೆ ಕರೆದೊಯ್ಯಲು ಬಂದಿದ್ದಾರೆ ಎಂದು ಹೇಳಿದ್ದಾರೆ. “ನಾನು ಒಬ್ಬ ಮಗಳ ತಂದೆ. ಅವರು ನೇಹಾಳನ್ನು ಮನೆಗೆ ಕರೆದೊಯ್ಯಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ,” ಎಂದು ಮೋಹನ್‌ಲಾಲ್‌ ಹೇಳಿದ್ದಾರೆ. ಪೋಷಕರ ಈ ಮಾತುಗಳನ್ನು ಕೇಳಿ ನೇಹಾ ಸಂಪೂರ್ಣವಾಗಿ ಕಂಗಾಲಾಗಿರುವುದು ಪ್ರೋಮೋದಲ್ಲಿ ಕಂಡುಬಂದಿದೆ. ಸದ್ಯ ಇದಕ್ಕೆಲ್ಲಾ ಉತ್ತರ ತಿಳಿಯಲು ವೀಕ್ಷಕರು ಮುಂಬರುವ ಸಂಚಿಕೆ ಪ್ರಸಾರವಾಗುವವರೆಗೆ ಕಾಯಬೇಕಾಗಿದೆ.
ಇತ್ತೀಚಿನ ಸಂಚಿಕೆಯೊಂದರಲ್ಲಿ ನೇಹಾ, ಸಹ ಸ್ಪರ್ಧಿ ತಾಶಿ ಅವರಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರ ಪೋಷಕರು ಒಪ್ಪಿದರೆ ಈ ಸಂಬಂಧವನ್ನು ಮುಂದುವರಿಸಲು ಬಯಸುವುದಾಗಿ ಆಕೆ ಹೇಳಿದ್ದರು. ತಾಶಿ ಅವರು ವೇದಾಂಗಿ ಜೊತೆ ಫ್ಲರ್ಟ್ ಮಾಡುತ್ತಿದ್ದರೆಂಬ ವಿಷಯ ತಿಳಿದ ನಂತರ ನೇಹಾ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯ ಬೆನ್ನಲ್ಲೇ ತಾಶಿ, ತನಗೆ ವೇದಾಂಗಿ ಮೇಲೆ ಅಂತಹ ಯಾವುದೇ ಉದ್ದೇಶವಿರಲಿಲ್ಲ ಎಂದು ಪ್ರಾಮಿಸ್ ಮಾಡಿದ್ದರು. ಇದಕ್ಕೂ ಹಿಂದಿನ ಸಂಚಿಕೆಯೊಂದರಲ್ಲಿ ತಾಶಿ ಕೂಡ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page