ಪ್ರಾಣ ಭಯದಿಂದ ಲಾರಿಯಿಂದ ಜಿಗಿದ ವ್ಯಕ್ತಿ! ಬಂಡೆ ಕಲ್ಲಿಗೆ ತಲೆ ಅಪ್ಪಳಿಸಿ ದುರ್ಮರಣ!!

ಮಡಿಕೇರಿ : ನಿಯಂತ್ರಣ ತಪ್ಪಿದ ಲಾರಿಯಿಂದ ಜಿಗಿದ ಚಾಲಕನ ತಲೆ ಬಂಡೆ ಕಲ್ಲುಗಳಿಗೆ ಅಪ್ಪಳಿಸಿ ಸಾವನ್ನಪ್ಪಿರುವ ಘಟನೆ ಕುಶಾಲನಗರ ತಾಲೂಕಿನ ಅರೆಗಲ್ಲು ಕಲ್ಲುಕೋರೆಯಲ್ಲಿ‌ ಭಾನುವಾರ ಮಧ್ಯಾಹ್ನ ನಡೆದಿದೆ. ಕುಶಾಲನಗರದ ಟೌನ್ ಕಾಲನಿ ನಿವಾಸಿ ಆರ್ಮುಗಂ ಅವರ ಪುತ್ರ ವಿನ್ಸೆಂಟ್ (35) ಎಂಬವರೇ ಮೃತ ದುರ್ದೈವಿ ಎಂದು ಮೂಲಗಳು ತಿಳಿಸಿವೆ.

Advertisement

ಕುಶಾಲನಗರ ಸಮೀಪದ ತೊರೆನೂರಿನ ಅರೆಗಲ್ಲು ಕೋರೆಯಲ್ಲಿ ಕಲ್ಲು ತುಂಬಿದ ಲಾರಿ ಚಾಲನೆ ಮಾಡುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಸುಮಾರು 25 ಅಡಿ ಆಳದ ಕಂದಕಕ್ಕೆ ಉರುಳಿದೆ. ಈ ಸಂದರ್ಭ ಅದರಲ್ಲಿದ್ದ ಚಾಲಕ ವಿನ್ಸೆಂಟ್ ಪ್ರಾಣ ಭಯದಿಂದ ಲಾರಿಯಿಂದ ಜಿಗಿದಿದ್ದಾರೆ. ಆದರೆ ದುರದೃಷ್ಟವಶಾತ್ ಕಂದಕದಲ್ಲಿದ್ದ ಬಂಡೆ ಕಲ್ಲುಗಳಿಗೆ ತಲೆ ಅಪ್ಪಳಿಸಿ ದುರ್ಮರಣಕ್ಕೀಡಾಗಿದ್ದಾರೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page