ಭುವನೇಶ್ವರಿಯಾಗಿ ಭಕ್ತರಿಗೆ ದರ್ಶನ ನೀಡಿದ ಶೃಂಗೇರಿ ಶಾರದಾಂಬೆ! ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಯಿಗೆ ವಿಶೇಷ ಅಲಂಕಾರ!!

ಶೃಂಗೇರಿ : ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮದ ಕಾವು ಏರುತ್ತಿದ್ದಂತೆ, ಕಾಫಿನಾಡಿನ ಪವಿತ್ರ ಪುಣ್ಯಕ್ಷೇತ್ರ ಶೃಂಗೇರಿಯಿಂದ ಕನ್ನಡಿಗರೆಲ್ಲರೂ ಕಣ್ಣುತುಂಬಿಕೊಳ್ಳುವಂತಹ ಅತ್ಯಂತ ರೋಮಾಂಚನಕಾರಿ ಹಾಗೂ ದಿವ್ಯ ಸುದ್ದಿಯೊಂದು ಹೊರಬಿದ್ದಿದೆ! ವಿದ್ಯೆ, ಜ್ಞಾನ ಮತ್ತು ಕಲೆಯ ಅಧಿದೇವತೆಯಾದ ಶ್ರೀ ಶಾರದಾಂಬೆಯು ಈ ವಿಶೇಷ ಸಂದರ್ಭದಲ್ಲಿ ಸಾಕ್ಷಾತ್ ‘ನಾಡದೇವಿ ಭುವನೇಶ್ವರಿ’ಯ ರೂಪ ತಾಳಿ ಭಕ್ತರಿಗೆ ದರ್ಶನ ನೀಡಿದ್ದಾಳೆ ಎಂದು ಮೂಲಗಳು ಹೇಳಿವೆ.

Advertisement

ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ, ಶತಮಾನಗಳ ಆಧ್ಯಾತ್ಮಿಕ ಪರಂಪರೆ ಹೊಂದಿರುವ ತುಂಗಾ ತೀರದ ಶೃಂಗೇರಿ ಶಾರದಾ ಪೀಠದಲ್ಲಿ ಇಂತಹದೊಂದು ಅಪರೂಪದ ಅಲಂಕಾರ ಜರುಗಿದ್ದು ಅತ್ಯಂತ ವಿಶೇಷ. ಶಾರದಾಂಬೆಗೆ ಕನ್ನಡಾಂಬೆಯಾದ ಭುವನೇಶ್ವರಿಯ ದಿವ್ಯ ಶೃಂಗಾರ ಹಾಗೂ ಅಲಂಕಾರ ಮಾಡಲಾಗಿದ್ದು, ತಾಯಿಯ ಈ ತೇಜೋಮಯ ಸ್ವರೂಪವನ್ನು ಕಂಡ ಭಕ್ತರ ಕಣ್ಣುಗಳಲ್ಲಿ ಭಕ್ತಿ ಹಾಗೂ ಭಾಷಾಭಿಮಾನದ ಆನಂದಭಾಷ್ಪ ಹರಿಯುತ್ತಿದೆ. ಕನ್ನಡ ಭಾಷೆ ಎಂದರೆ ಅದು ಕೇವಲ ಮಾತನಾಡುವ ನುಡಿಯಲ್ಲ, ಅದು ಕೋಟ್ಯಂತರ ಕನ್ನಡಿಗರ ಉಸಿರು ಮತ್ತು ಆತ್ಮಗೌರವ. ಇಂತಹ ನಾಡಿನ ಭವ್ಯ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಸ್ಮರಿಸುವ ರಾಜ್ಯೋತ್ಸವದ ದಿನದಂದು, ಸಾಕ್ಷಾತ್ ಶಾರದಾಂಬೆಯೇ ಭುವನೇಶ್ವರಿಯಾಗಿ ಕಂಗೊಳಿಸುತ್ತಿರುವುದು ಶೃಂಗೇರಿಯ ಇತಿಹಾಸದಲ್ಲೇ ಅತ್ಯಂತ ಭಾವನಾತ್ಮಕ ಹಾಗೂ ಪವಿತ್ರ ಕ್ಷಣವಾಗಿದೆ. ಈ ಸುಂದರ ದೃಶ್ಯವನ್ನು ನೋಡಲು ಮೂಲೆಮೂಲೆಗಳಿಂದ ಭಕ್ತರ ಸಾಗರವೇ ಹರಿದುಬರುತ್ತಿದೆ.

Advertisement
Advertisement

ಪ್ರತಿಯೊಬ್ಬ ಕನ್ನಡಿಗನಲ್ಲೂ ಭಕ್ತಿ ಹಾಗೂ ದೇಶಪ್ರೇಮದ ಕಿಚ್ಚನ್ನು ಹತ್ತಿಸಿರುವ ಈ ದಿವ್ಯ ಅಲಂಕಾರವು, ರಾಜ್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ದೈವಿಕ ಮೆರುಗು ತಂದಿದೆ. ಸಮಸ್ತ ಕನ್ನಡಿಗರ ಸುಖ-ಶಾಂತಿ, ಸಮೃದ್ಧಿ ಹಾಗೂ ಕನ್ನಡ ನುಡಿಯ ಏಳಿಗೆಗಾಗಿ ತಾಯಿಯ ಬಳಿ ಪ್ರಾರ್ಥಿಸುತ್ತಿರುವ ಭಕ್ತಾದಿಗಳು ಈ ವೈಭವವನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page