ಹಬ್ಬಗಳ ಸಂದರ್ಭದಲ್ಲಿ ವಿಮಾನ ಪ್ರಯಾಣ ಬೇಡ! ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ!!

ಹಬ್ಬಗಳ ಸಂದರ್ಭದಲ್ಲಿ ವಿಮಾಣ ಪ್ರಯಾಣ ದರದಲ್ಲಿ ಭಾರೀ ಏರಿಕೆಯಾಗುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ. ಅಲ್ಲದೆ, ಅರ್ಜಿದಾರರ ಪರ ವಕೀಲರಿಗೆ ʼವಿಮಾನದಲ್ಲಿ ಪ್ರಯಾಣಿಸಬೇಡಿʼ ಎಂದು ನ್ಯಾಯ ಮೂರ್ತಿಗಳು ಪ್ರತಿಕ್ರಿಯೆಸಿದ್ದಾರೆ ಎಂದು ವರದಿಯಾಗಿದೆ.

Advertisement

ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌, ಸಂದೀಪ್‌ ಮೆಹ್ತಾ ಮತ್ತು ಅಪರೇಶ್‌ ಕುಮಾರ್‌ ಸಿಂಗ್‌ ಅವರನ್ನೊಳ ಗೊಂಡ ಪೀಠದ ಮುಂದೆ ವಕೀಲರು ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದರು. ಹಬ್ಬದ ಸಂದರ್ಭದಲ್ಲಿ ವಿಮಾನ ಪ್ರಯಾಣ ದರ ಶೇ. 700ರಷ್ಟು ಏರಿಕೆಯಾಗಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ʼವಿಮಾನದಲ್ಲಿ ಪ್ರಯಾಣಿಸಬೇಡಿʼ ಎಂದು ಹೇಳಿತು. ವಿಮಾನ ಪ್ರಯಾಣ ಅತ್ಯಗತ್ಯ ಸೇವೆಯಾಗಿದ್ದು, ದರ ಏರಿಕೆ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ವಕೀಲರು ವಾದಿಸಿದರು ಎಂದು ಜಾಲತಾಣ ಮೂಲಗಳು ತಿಳಿಸಿವೆ.

Advertisement

ಸಾಮಾಜಿಕ ಕಾರ್ಯಕರ್ತ ಎಸ್. ಲಕ್ಷ್ಮೀನಾರಾಯಣ ಅವರು ವಿಮಾನ ಯಾನ ಸಂಸ್ಥೆಗಳು ಹಬ್ಬದ ಸಂದರ್ಭದಲ್ಲಿ ಮನಬಂದಂತೆ ದರ ಹೆಚ್ಚಿಸುತ್ತಿವೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಜನವರಿಯಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಹಬ್ಬದ ಸಂದರ್ಭದ ಅತಿಯಾದ ದರ ಏರಿಕೆಯನ್ನು ಶೋಷಣೆ ಎಂದು ಕರೆದಿತ್ತು. ವಿಮಾನ ಟಿಕೆಟ್ ದರದಲ್ಲಿ ಪಾರದರ್ಶಕತೆ, ನಿಯಂತ್ರಣ ವ್ಯವಸ್ಥೆ ರೂಪಿಸುವಂತೆ ಕೇಂದ್ರ ಸರಕಾರಕ್ಕೂ ಸೂಚಿಸಿತ್ತು. ಈ ಸಂಬಂಧದ ಅರ್ಜಿಯ ಮುಂದಿನ ವಿಚಾರಣೆ ನವೆಂಬರ್ 16ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page