ನಿದ್ದೆ ಕದ್ದ ವಂದೇ ಭಾರತ್‌ ಸ್ಲೀಪರ್‌ ರೈಲು! ಪ್ರಯಾಣಿಕರಿಗೆ ದುಬಾರಿಯಾದ ಭಾರತದ ಹೈಸ್ಪೀಡ್‌ ಟ್ರೈನ್!!

ನವದೆಹಲಿ : ನ.1ರಂದು ಭಾನುವಾರ ಚಾಲನೆ ಪಡೆದುಕೊಂಡಿರುವ ನೂತನ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಈ ಮಾರ್ಗದ ಅತ್ಯಂತ ವೇಗದ ಹಾಗೂ ನವೀನ ಸೌಲಭ್ಯಗಳನ್ನು ಹೊಂದಿರುವ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದು ಪ್ರಯಾಣಿಕರ ಜೇಬಿಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ.

Advertisement

ವಂದೇ ಭಾರತ್ ಸ್ಲೀಪರ್ ರೈಲಿನ ಎಸಿ 3-ಟೈರ್ ದರವು ಈ ಮಾರ್ಗದಲ್ಲಿ ಸಂಚರಿಸುವ ಇತರ ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ಶೇ.60ರಿಂದ 96ರಷ್ಟು ದುಬಾರಿಯಾಗಿದೆ. ಅದೇ ರೀತಿ, ಎಸಿ 2-ಟೈರ್ ದರವು ಶೇ.65ರಿಂದ 78ರಷ್ಟು ಹಾಗೂ ಎಸಿ 1-ಟಯರ್ ದರವು ಶೇ.20ರಿಂದ 30ರಷ್ಟು ಹೆಚ್ಚಾಗಿದೆ. ನೂತನ ರೈಲಿನ ಟಿಕೆಟ್‌ ದರವನ್ನು, ಎಸಿ 3-ಟೈರ್‌ಗೆ 2,810 ರು, ಎಸಿ 2-ಟಯರ್‌ಗೆ 3,630 ರು. ಹಾಗೂ ಎಸಿ 1-ಟೈರ್‌ಗೆ 4,450 ರು. ನಿಗದಿಪಡಿಸಲಾಗಿದೆ. ಇದಕ್ಕೆ ಹೋಲಿಸಿದರೆ ಈ ಮಾರ್ಗದಲ್ಲಿ ಚಲಿಸುವ ಕೊಯಮತ್ತೂರು-ಮುಂಬೈ ಎಲ್‌ಟಿಟಿ ಎಕ್ಸ್‌ಪ್ರೆಸ್‌ನ ಎಸಿ 3, ಎಸಿ 2 ಮತ್ತು ಎಸಿ 1 ಟಯರ್ ದರಗಳು ಕ್ರಮವಾಗಿ 1,435 ರು., 2,045 ರು. ಮತ್ತು 3,425 ರು. ಇವೆ. ಇನ್ನು ಅಜ್ಮೇರ್ ಎಕ್ಸ್‌ಪ್ರೆಸ್‌ನ ದರಗಳು 1,510 ರು., 2,155 ರು. ಮತ್ತು 3,610 ರು. ಇವೆ. ಪ್ರೀಮಿಯಂ ಎಂದು ಪರಿಗಣಿಸಲಾದ ಹಮ್‌ಸಫರ್ ಎಕ್ಸ್‌ಪ್ರೆಸ್‌ನ ಎಸಿ 3 ದರಕ್ಕಿಂತಲೂ (1,725 ರು.) ವಂದೇ ಭಾರತ್ ಸ್ಲೀಪರ್‌ನ ಎಸಿ 3 ದರವು ಶೇ.63ರಷ್ಟು ಹೆಚ್ಚಾಗಿದೆ ಎಂದು ಜಾಲತಾಣ ಮೂಲಗಳು ವರದಿಯಲ್ಲಿ ದೃಢಪಡಿಸಿವೆ.

Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page