ಬಿಜೆಪಿಯ ಹಿರಿಯ ಕಾರ್ಯಕರ್ತ ಕುಕ್ಕುಂಜೋಡು ಪ್ರಮೋದ್‌ ಕುಮಾರ್‌ ರೈ ನಿಧನ! ಇಂದು ಸಂಜೆ 4.30ಕ್ಕೆ ನಡೆಯಲಿದೆ ಅಂತ್ಯಕ್ರಿಯೆ!!

ಪುತ್ತೂರು: ಕೆದಂಬಾಡಿ ಗ್ರಾಮದ ಕುಕ್ಕುಂಜೋಡು ನಿವಾಸಿ ಪ್ರಮೋದ್‌ ಕುಮಾರ್‌ ರೈ (66ವ) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ನ.3ರಂದು ಸ್ವಗೃಹದಲ್ಲಿ ನಿಧನರಾದರು ಎಂದು ತಿಳಿದು ಬಂದಿದೆ.

Advertisement

ಬಿಜೆಪಿ ಹಿರಿಯ ಕಾರ್ಯಕರ್ತರಾಗಿದ್ದ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಇವರು ಮೊಟ್ಟೆತ್ತಡ್ಕದ ಡಿಆರ್ಸಿಯಲ್ಲಿ ಭದ್ರತಾ ಮೇಲ್ವಿಚಾರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಆಶಾಲತಾ ರೈ, ಪುತ್ರರಾದ ಶಮಿತ್‌ ರೈ, ಶಕಿತ್‌ ರೈ, ಸಹೋದರರಾದ ರಮೇಶ್‌ ರೈ, ಮಹಾಬಲ ರೈ, ಸಹೋದರಿಯರಾದ ಮಮತಾ ರೈ, ಸುಧಾ ರೈ, ಮಲ್ಲಿಕಾ ರೈ, ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನ.3ರಂದು ಸಂಜೆ 4:30 ಗಂಟೆಗೆ ಸ್ವಗೃಹದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page