ಹಾಸ್ಟೆಲ್‌ನ ನೀರಿನ ಟ್ಯಾಂಕ್‌ನಲ್ಲಿ ಮಂಗನ ಕೊಳೆತ ಶವ ಪತ್ತೆ! 54 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥ!!

ಗುಜರಾತ್‌ನ ಗುವಾಹಟಿಯ ಪ್ರಸಿದ್ಧ ಅಸ್ಸಾಂ ಇಂಜಿನಿಯರಿಂಗ್‌ ಕಾಲೇಜಿನ ಹಾಸ್ಟೆಲ್‌ನಲ್ಲಿ ಬೇಜವಾಬ್ದಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಲೇಜಿನ 7ನೇ ನಂಬರ್‌ ಹಾಸ್ಟೆಲ್‌ನ ಮೇಲ್ಚಾವಣಿಯ ನೀರಿನ ಟ್ಯಾಂಕ್‌ನಲ್ಲಿ ಮಂಗನ ಕೊಳೆತ ಶವ ಪತ್ತೆಯಾಗಿದ್ದು, ಇದೇ ಕಲುಷಿತ ನೀರನ್ನು ಬಳಸಿದ ಬರೋಬ್ಬರಿ 54 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ ಎಂದು ವರದಿಯಾಗಿದೆ.

Advertisement

ವಿದ್ಯಾರ್ಥಿಗಳು ತೀವ್ರ ಹೊಟ್ಟೆನೋವು, ವಾಂತಿ ಮತ್ತು ಜ್ವರದಿಂದ ಬಳಲುತ್ತಿದ್ದು, ಅವರನ್ನು ಸರ್ಕಾರಿ ಆಯುರ್ವೇದ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದುರ್ಗಾಪೂಜೆ ರಜೆಯ ಮುಗಿಸಿ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಮರಳಿದಾಗಿನಿಂದ ಈ ಸಮಸ್ಯೆ ಶುರುವಾಗಿದೆ. ಕುಡಿಯುವ ಮತ್ತು ಬಳಸುವ ನೀರು ತೀವ್ರವಾಗಿ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ ಮೇಲ್ವಿಚಾರಕರಿಗೆ ದೂರು ನೀಡಿದ್ದರು. ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಕಾಣಿಸಿಕೊಂಡಾಗ, ಅದು ಮೆಸ್‌ನ ಆಹಾರದ ಸಮಸ್ಯೆಯಿಂದ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ದಿನೇ ದಿನೇ ವಿದ್ಯಾರ್ಥಿಗಳು ಬೀಳುತ್ತಿದ್ದ ಅನಾರೋಗ್ಯವನ್ನು ಕಂಡು ಅನುಮಾನಗೊಂಡ ವಿದ್ಯಾರ್ಥಿಗಳ ಗುಂಪೊಂದು ಭಾನುವಾರ ಸ್ವತಃ ತಾವೇ ಮೇಲೆ ಹೋಗಿ ಟ್ಯಾಂಕ್ ಪರಿಶೀಲಿಸಿದೆ. ಈ ವೇಳೆ ಟ್ಯಾಂಕ್ ಒಳಗಡೆ ಮಂಗನ ಕೊಳೆತ ಹಾಗೂ ಕರಗಿದ ಸ್ಥಿತಿಯಲ್ಲಿದ್ದ ಕಳೇಬರ ಪತ್ತೆಯಾಗಿದೆ. ಇದೇ ನೀರನ್ನು ವಿದ್ಯಾರ್ಥಿಗಳು ಕುಡಿಯಲು, ಸ್ನಾನ ಮಾಡಲು ಬಳಸುತ್ತಿದ್ದರು ಎಂಬುದು ಆತಂಕ ಮೂಡಿಸಿದೆ ಎಂದು ತಿಳಿದು ಬಂದಿದೆ.

Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page