ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮತ್ತು ದೀಪೋತ್ಸವ ಸಮಿತಿಯ ಆಶ್ರಯದಲ್ಲಿ ಪುತ್ತೂರು ದೀಪೋತ್ಸವ-2026 ಡಿ.8ಕ್ಕೆ ಆಯೋಜಿಸಲಾಗುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ದೇವರ ಅಪ್ಪಣೆ ಪಡೆಯಲು ವಿಶೇಷ ಪ್ರಾರ್ಥನೆಯನ್ನು ಸೆ.9ರಂದು ದೇವಾಲಯದಲ್ಲಿ ಮಾಡಲಾಯಿತು.
ದೀಪೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಅವರ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ಜೊತೆಯಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಉಪಸ್ಥಿತಿಯಲ್ಲಿ ದೇವರ ನಡೆಯಲ್ಲಿ ಕಾರ್ಯಕ್ರಮಕ್ಕೆ ಅಪ್ಪಣೆ ಪಡೆದು ಪ್ರಾರ್ಥನೆ ನೆರವೇರಿಸಲಾಯಿತು. ಈ ಸಂದರ್ಭ ಸಮಿತಿಯ ಡಾ. ರವೀಶ ಪಡುಮಲೆ, ಉದ್ಯಮಿ ಕರುಣಾಕ ರೈ ದೇರ್ಲ, ಗೋಪಾಲಕೃಷ್ಣ ಎಂ, ದಾಮೋದರ್ ಪಾಟಾಳಿ, ಸಂತೋಷ್ ಕುಮಾರ್, ಹರಿಣಾಕ್ಷಿ ಜೆ ಶೆಟ್ಟಿ, ನಯನಾ ರೈ, ರೇಣುಕಾ ಮುರಳಿಧರ ರೈ ಅಮಿತಾ ಶೆಟ್ಟಿ ನುಳಿಯಾಲು, ರತ್ನಾಕರ್ ನಾಕ್, ಸುಜೀರ್ ಶೆಟ್ಟಿ, ಸಂತೋಷ್ ಕುಮಾರ್ ರೈ ಕೈಕಾರ, ಪ್ರವೀಣ್ ಕುಮಾರ್ ರೈ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು. ದೇವಳದ ಪ್ರಧಾನ ಅರ್ಚಕ ವೇ|ಮೂ|| ವಿ.ಎಸ್ ಭಟ್ ಪ್ರಾರ್ಥಿಸಿದರು.










