ಅಮೆರಿಕಾ: ನೆಲ, ಆಕಾಶ, ಸಮುದ್ರದಲ್ಲಿ ನಡೆಯುತ್ತಿದ್ದ ಶಸ್ತ್ರಾಸ್ತ್ರಗಳ ಸಂಗ್ರಹ ಇದೀಗ ಬಾಹ್ಯಾಕಾಶಕ್ಕೂ ವಿಸ್ತರಿಸಿದೆ. ಶತ್ರುಗಳಿಂದ ಅಮೆರಿಕ ಹಾಗೂ ಅದರ ಮಿತ್ರ ಪಡೆಗಳನ್ನು ರಕ್ಷಿಸುವ ಸಾಮರ್ಥ್ಯವಿರುವ ಶಸ್ತ್ರಾಸ್ತ್ರಗಳನ್ನು ಭೂ ಕಕ್ಷೆಯಲ್ಲೂ ನಿಯೋಜಿಸಿರುವುದಾಗಿ ಇದೇ ಮೊದಲ ಬಾರಿಗೆ ದೊಡ್ಡಣ್ಣ ಅಮೆರಿಕ ಒಪ್ಪಿಕೊಂಡಿದೆ. ಈ ನಡೆ, ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಬಗ್ಗೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಕಕ್ಷೆಯಲ್ಲಿಟ್ಟಿರುವ ಶಸ್ತ್ರಾಸ್ತ್ರ ಯಾವ ರೀತಿಯದ್ದು ಎಂಬ ಮಾಹಿತಿಯನ್ನು ಅಮೆರಿಕ ನೀಡಿಲ್ಲ. ಈ ಶಸ್ತ್ರಾಸ್ತ್ರಗಳು ಎಷ್ಟಿವೆ, ಅವುಗಳ ಸಾಮರ್ಥ್ಯ, ಎಲ್ಲಿರಿಸಲಾಗಿದೆ ಎಂಬ ವಿಚಾರವನ್ನು ಬಾಹ್ಯಾಕಾಶ ಪಡೆಯ ವಕ್ತಾರ ಬಹಿರಂಗಪಡಿಸಿಲ್ಲ.
ಪರಮಾಣು ಅಥಾವ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತಗಳನ್ನು ಭೂಮಿಯ ಕಕ್ಷೆಯಲ್ಲಿ ಇರಿಸುವುದನ್ನು 1967ರ ಬಾಹ್ಯಾಕಾಶ ಒಪ್ಪಂದವು ನಿಷೇಧಿಸುತ್ತದೆ. ಚಂದ್ರ ಮತ್ತು ಇತರ ಕಾಯಗಳ ಮೇಲೆ ಸೇನಾ ನೆಲೆಗಳು, ಸ್ಥಾವರಗಳು ರಕ್ಷಣಾ ನೆಲೆಗಳನ್ನು ಸ್ಥಾಪಿಸುವುದು, ಶಸ್ತ್ರಾಸ್ತ್ರ ಪರೀಕ್ಷೆ, ಸೇನಾ ಕವಾಯತುಗಳನ್ನೂ ನಡೆಸುವಂತಿಲ್ಲ. ಹಾಗಿದ್ದೂ, ಭೂ ಕಕ್ಷೆಯಲ್ಲಿರುವ ಎಲ್ಲಾ ಶಸ್ತ್ರಾಸ್ತ್ರಗಳ ಮೇಲೆ ಸಂಪೂರ್ಣ ನಿಷೇಧವನ್ನೇನೂ ಹೇರುವುದಿಲ್ಲ ಎಂದು ತಿಳಿದುಬಂದಿದೆ.
ಇದಕ್ಕೆ ಭಾರತದ ನಿಲುವೇನು ಎಂಬುದು ಇನ್ನಷ್ಟೇ ಕಾದುನೋಡಬೇಕಾಗಿದೆ.














