ವಿಜಯ್‌ ಪ್ರಕಾಶ್‌ ಜೊತೆಗೆ ಹಾಡುವ ಅವಕಾಶ ನಿಮ್ಮದಾಗಿಸಿ! ಇದು ದಸರಾ ಹಬ್ಬದ ವಿಶೇಷ!

ಮೈಸೂರು: ಖ್ಯಾತ ಬಹುಭಾಷಾ ಗಾಯಕ ವಿಜಯಪ್ರಕಾಶ್ ಅವರೊಂದಿಗೆ ವೇದಿಕೆ ಹಂಚಿಕೊಂಡು ಗಾಯನ ಪ್ರಸ್ತುತಪಡಿಸುವ ಅವಕಾಶವನ್ನು ಈ ಬಾರಿಯ ‘ಯುವಸಂಭ್ರಮ’ದಲ್ಲಿ ಕಲ್ಪಿಸಲಾಗುತ್ತಿದೆ. ಇದರಲ್ಲಿ ರಾಜ್ಯದ ಆಯ್ದ 50 ಯುವ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ.

Advertisement

ನಾಡಹಬ್ಬ ದಸರಾ ಭಾಗವಾಗಿ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮದ ನಡೆಯಲಿದ್ದು, ಅ.7ರಂದು ವಿಶಿಷ್ಟವಾದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ವಿಜಯಪ್ರಕಾಶ್ ಮತ್ತು ತಂಡ ನಡೆಸಿಕೊಡುವ ಸಂಗೀತ ಸಂಜೆಯಲ್ಲಿ ಪಾಲ್ಗೊಂಡು ಅವರೊಂದಿಗೆ ಹಾಡುವ ಅವಕಾಶ ಯುವಕ, ಯುವತಿಯರಿಗೆ ದೊರೆಯಲಿದೆ.

Advertisement
Advertisement


ಇದಕ್ಕಾಗಿ, ರಾಜ್ಯದ ಯಾವುದೇ ಜಿಲ್ಲೆಯ ಪ್ರತಿಭೆಗಳು ಗಾಯನದ ವಿಡಿಯೊ ಕಳುಹಿಸಿ ಪ್ರಯತ್ನಿಸಬಹುದಾಗಿದೆ. ಸೆ.20 ಹಾಗೂ 21ರಂದು ಕಳುಹಿಸುವುದಕ್ಕೆ ಮಾತ್ರ ಅವಕಾಶವಿದೆ. 16ರಿಂದ 24 ವರ್ಷದವರು ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆ, ಜನಪದ ಗೀತೆ, ಪಾಶ್ಚಾತ್ಯ ಶೈಲಿಯ ಗೀತೆಗಳು, ಚಲನಚಿತ್ರ ಗೀತೆಗಳು ಸೇರಿದಂತೆ ಯಾವುದೇ ರೀತಿಯ ಹಾಡುಗಳನ್ನು ಬೇಕಾದರೂ ಹಾಡಿ ವಿಡಿಯೊ ಮಾಡಿ ಕಳುಹಿಸಬಹುದು.
ನಂತರ ಅದನ್ನು ಯುವಸಂಭ್ರಮ ಉಪ ಸಮಿತಿಯವರು ಹಾಗೂ ವಿಜಯಪ್ರಕಾಶ್ ತಂಡದವರು ಪರಿಶೀಲಿಸಿ, ಅತ್ಯುತ್ತಮವಾಗಿ ಹಾಡಿದ ಐವತ್ತು ಮಂದಿಯನ್ನು ಆಯ್ಕೆ ಮಾಡುತ್ತಾರೆ. ಇದರೊಂದಿಗೆ, ಯುವಸಂಭ್ರಮದ ವೇದಿಕೆಯನ್ನು ಗಾಯನ ಪ್ರತಿಭಾ ಶೋಧಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ, ಖ್ಯಾತ ಗಾಯಕರೊಂದಿಗೆ ನೂರಾರು ಪ್ರೇಕ್ಷಕರ ಸಮ್ಮುಖದಲ್ಲಿ ಹಾಡುವ, ಸಾರ್ವಜನಿಕರನ್ನು ರಂಜಿಸುವ ಅವಕಾಶವನ್ನು ಯುವಜನರಿಗೆ ಕಲ್ಪಿಸಲಾಗುತ್ತಿದೆ. ಯುವಸಂಭ್ರಮದಲ್ಲಿ ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಯ್ಕೆಯಾದ ಗಾಯಕರಿಗೆ ವಿಜಯಪ್ರಕಾಶ್ ಹಾಗೂ ವಿಜಯಪ್ರಕಾಶ್ ಕಲ್ಬರಲ್ ಕ್ಲಬ್ ತಂಡದವರು ತರಬೇತಿ ನೀಡುತ್ತಾರೆ. ಅವರೆಲ್ಲರೂ ಸೇರಿ ಅ.7ರಂದು ಪ್ರದರ್ಶನ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
‘ನಮ್ಮೂರು ಮೈಸೂರಿನಲ್ಲಿ ಯುವ ಪ್ರತಿಭೆಗಳೊಂದಿಗೆ ನಾನು, ನನ್ನೊಂದಿಗೆ ಯುವ ಪ್ರತಿಭೆಗಳು ಹಾಡುವಂಹತ ವಿಶೇಷ ಅವಕಾಶ ಇದಾಗಿದೆ. ಇದು ಪ್ರೇಕ್ಷಕರಿಗೆ ಮುದ ನೀಡಲಿದ್ದು, ಕಾರ್ಯಕ್ರಮಕ್ಕೆ ಬಹಳ ಉತ್ಸುಕನಾಗಿದ್ದೇನೆ. ಇದೊಂದು ರೀತಿಯಲ್ಲಿ ಸಾಂಸ್ಕೃತಿಕ ಚಳವಳಿಯೇ ಸರಿ’ ಎನ್ನುತ್ತಾರೆ ವಿಜಯಪ್ರಕಾಶ್.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page