ಚೆನ್ನೈ : ಬಹುಭಾಷಾ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಕುಟುಂಬ ಮದುವೆ ಸಂಭ್ರಮದಲ್ಲಿ ನಿರತವಾಗಿದೆ. ಅರ್ಜುನ್ ಅವರ ಕಿರಿಯ ಪುತ್ರಿಯ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಅಂಜನಾ ಅರ್ಜುನ್ ಇತ್ತೀಚೆಗೆ ತನ್ನ ಬಹು ಕಾಲದ ವಿದೇಶಿ ಗೆಳೆಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಸಂಭ್ರಮದ ಫೋಟೋವನ್ನು ಅಂಜನಾ ಹಂಚಿಕೊಂಡಿದ್ದಾರೆ. ಅಂಜನಾ ಅವರು ಕೆಲ ವರ್ಷಗಳಿಂದ ವಿದೇಶಿ ಉದ್ಯಮಿಯಾಗಿರುವ ಇಸಾಯ್ ನ್ಯೂಟರ್ ಎನ್ನುವವರನ್ನು ಪ್ರೀತಿಸುತ್ತಿದ್ದರು. ಅಕ್ಟೋಬರ್ 19ರಂದು ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ ವಿದೇಶದಲ್ಲೇ ಅಂಜನಾ ಅವರ ವಿವಾಹ ನೆರವೇರಿದೆ. ಎರಡೂ ಕುಟುಂಬಗಳ ಹಿರಿಯರು, ಆಪ್ತರು ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಆಶೀರ್ವಾದ ಮಾಡಿದ್ದಾರೆ ಎಂದು ವರದಿಯಾಗಿದೆ.
ವಿಶೇಷವೆಂದರೆ ಈ ಮದುವೆ ಸಂಭ್ರಮ ಭಾರತೀಯ ಸಂಪ್ರದಾಯದಂತೆಯೇ ಆಗಿದ್ದು, ಇದರ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಜನಾ-ಇಸಾಯ್ ಕಳೆದ ವರ್ಷ ಇಟಲಿಯಲ್ಲಿ ನಿಶ್ಚಿತಾರ್ಥವಾಗಿದ್ದರು. ಇದೀಗ ವಿದೇಶದಲ್ಲಿ ಭಾರತೀಯ ಸಂಪ್ರದಾಯದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆಯ ವಿಧಿ ವಿಧಾನ, ಉಡುಗೆ ತೊಡುಗೆಯಲ್ಲೂ ಭಾರತೀಯ ಸಂಪ್ರದಾಯದ ಎದ್ದು ಕಾಣಿದೆ. ಸರಣಿ ಫೋಟೋಸ್ಗಳನ್ನು ಅಂಜನಾ ಹಂಚಿಕೊಂಡಿದ್ದು, ಎರಡೂ ಕುಟುಂಬ ಖುಷಿಯಾಗಿಯೇ ಫೋಟೋಗೆ ಪೋಸ್ ಕೊಟ್ಟಿದ್ದು, ಈ ಫೋಟೋಸ್ ನೋಡಿ ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ.














