“ಗಾಂಧಿ, ನೆಹರೂ ಹಿಂದೆ ಹೋಗಿದ್ದು ಸಾಕು” | “ನಮಗೆ ಮುಸ್ಲಿಂ ನಾಯಕರೇ ಬೇಕು” | ಅಸಾದುದ್ದೀನ್ ಒವೈಸಿ ಮಾತಿಗೆ ಕಾಂಗ್ರೆಸ್‌ ಕಂಗಾಲು!!

ನವದೆಹಲಿ : ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಒವೈಸಿ ಮಹತ್ವದ ಕರೆ ನೀಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ನೀಡಿದ ಕರೆಯಿಂದ ಕಾಂಗ್ರೆಸ್ ಕಂಗಾಲಾಗಿದೆ. ಇಷ್ಟು ವರ್ಷ ಗಾಂಧಿ, ನೆಹರೂ ಎಂದು ಅವರ ಹಿಂದೆ ಹೋಗಿದ್ದು ಸಾಕು. ನಮಗೆ ನಮ್ಮದೆ ಮುಸ್ಲಿಂ ನಾಯಕರು ಬೇಕು ಎಂದು ಒವೈಸಿ ಹೇಳಿದ್ದಾರೆ. ಮುಸ್ಲಿಂ ಸಮುದಾಯ ಸೇರಿದಂತೆ ಕೆಲ ಪ್ರಮುಖ ಸಮುದಾಯಗಳ ಭಾರಿ ಬೆಂಬಲದೊಂದಿಗೆ ಸಾಗುತ್ತಿರುವ ಕಾಂಗ್ರೆಸ್‌ಗೆ ಒವೈಸಿ ಕರೆ ನುಂಗಲಾರದ ತುಪ್ಪವಾಗಿ ಪರಿಣಿಮಿಸಿದೆ.

Advertisement

ಉತ್ತರ ಪ್ರದೇಶದ ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕಿರುವ ಅಸಾದುದ್ದೀನ್ ಒವೈಸಿ, ಮುಸ್ಲಿಂ ಸಮುದಾಯಗಳ ಮತ ಕ್ರೋಢೀಕರಿಸಲು ಮುಂದಾಗಿದ್ದಾರೆ. ಮುಸ್ಲಿಂ ಸಮುದಾಯದ ಕಷ್ಟಗಳು, ಸಮಸ್ಯೆಗಳ ಕುರಿತು ಯಾರು ಮಾತನಾಡುವುದಿಲ್ಲ. ನಾವು ಗಾಂಧಿ, ನೆಹರೂ ಎಂದು ಅವರಿಗೆ ಮತ ಹಾಕಿದ್ದೇವೆ. ಅವರನ್ನೇ ನಾಯಕರಾಗಿ ನಂಬಿದ್ದೇವೆ. ನಮ್ಮ ಸಮುದಾಯದ ಬೆಂಬಲದಿಂದ ಅವರು ಜನನಾಯಕರಾಗಿ ಬೆಳೆದರು. ನಮಗೆ ಮಾಡೆಲ್ ಬೇಕಿಲ್ಲ. ನಮ್ಮ ಸಮುದಾಯದವರೇ ನಾಯಕರಾಗಬೇಕು. ನಮ್ಮ ಮುಸ್ಲಿಂ ಸಮುದಾಯದ ಸಾಮಾನ್ಯ ವ್ಯಕ್ತಿಗಳೇ ನಾಯಕರಾದರೆ ಅವರಿಗೆ ಸಮಸ್ಯೆಗಳುು ಗೊತ್ತಿರುತ್ತದೆ, ಅದನ್ನು ಬಗೆಹರಿಸಲು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಒವೈಸಿ ಹೇಳಿದ್ದಾರೆ.

Advertisement
Advertisement

ನಾವು ಯಾರಿಗೂ ಜೀತದಾಳಾಗಿ ಇರಬೇಕಿಲ್ಲ. ಅವರು ನಮ್ಮ ಬಗ್ಗೆ ಮಾತನಾಡುತ್ತಾರೆ, ನಮಗೆ ಬೆಂಬಲ ಕೊಡುತ್ತಾರೆ ಎಂದು ಭಾವಿಸಿ ದಶಗಳಿಂದ ಮುಸ್ಲಿಂ ಸಮುದಾಯ ಮತ ಹಾಕುತ್ತಿದೆ. ಆದರೆ ಮುಸ್ಲಿಂ ಸಮುದಾಯಕ್ಕೆ ಸಿಕ್ಕೇದ್ದೇನು? ಸ್ವತಂತ್ರ ಭಾರತದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಬೆಂಬಲವಾಗಿ ನಿಲ್ಲುತ್ತಾ ಬಂದಿದೆ.ಇದೀಗ ಸಮಯ ಬಂದಿದೆ. ನಮ್ಮದೇ ನಾಯಕರು ಬೆಳೆಯಬೇಕು. ನಮ್ಮ ನಾಯಕರಿಗೆ ಮತ ಹಾಕಬೇಕು. ಸಮುದಾಯವನ್ನು ಗಟ್ಟಿಗೊಳಿಸಬೇಕು, ನಾಯಕರನ್ನು ಬೆಳೆಸಬೇಕು ಎಂದು ಒವೈಸಿ ಕರೆ ನೀಡಿದ್ದಾರೆ.
ಮುಸ್ಲಿಂ ಸಮುದಾಯದ ವಿಚಾರವಿರಬಹುದು, ಯಾವುದೇ ಇರಬಹುದು, ಎಐಎಂಐಎಂ ಪಾರ್ಟಿ ಎಲ್ಲೂ ರಾಜೀ ಮಾಡಿಕೊಳ್ಳದೆ ಧ್ವನಿ ಎತ್ತಿದೆ. 2024ರಲ್ಲಿ ಚುನಾವಣಾ ಆಯುಕ್ತರನ್ನು ನೇಮಕ ಮಾಡಿದಾಗ, ವೀಕ್ನೆಸ್, ಮುಂಬರುವ ಅಪಾಯದ ಕುರಿತು ಯಾರಿಗೂ ಅಂಜದೇ ಸಂಸತ್ತಿನಲ್ಲಿ ಗಟ್ಟಿಯಾಗಿ ಹೇಳಿದ್ದು ನಾನು ಎಂದು ಅಸಾದುದ್ದೀನ್ ಒವೈಸಿ ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page