ಪುಟ್ಟ ಕಂದನ ಉಸಿರನ್ನೇ ತೆಗೆದ ವಿದ್ಯುತ್‌ ತಂತಿ!

ಮಡಿಕೇರಿ : ಮನೆಯ ಬಾಗಿಲಿನ ಬಳಿ ಆಕಸ್ಮಿಕವಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಮೂರು ವರ್ಷದ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ.
ಚೆಟ್ಟಳ್ಳಿಯ ಪುತ್ತರಿರ ಶಿವು ನಂಜಪ್ಪ ಹಾಗೂ ರತಿ ನಂಜಪ್ಪ ದಂಪತಿಯ ದ್ವಿತೀಯ ಪುತ್ರ ಶಿಯಾನ್ ನಂಜಪ್ಪ (3) ಮೃತಪಟ್ಟ ಬಾಲಕ.

Advertisement

ಮನೆಯಲ್ಲಿ ಆಟವಾಡುತ್ತಿದ್ದವೇಳೆ ಮನೆಯ ಬಾಗಿಲಿನ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಬಾಲಕನಿಗೆ ಆಕಸ್ಮಿಕವಾಗಿ ತಗುಲಿದ್ದು, ವಿದ್ಯುತ್ ಸ್ಪರ್ಶದಿಂದ ಆತ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪುಟ್ಟ ಕಂದನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು ಘಟನೆಯಿಂದ ಇಡೀ ಗ್ರಾಮವೇ ಶೊಕದಲ್ಲಿ ಮುಳುಗಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page