ಬ್ರಹ್ಮಪುತ್ರ ನದಿಗೆ ಚೀನಾ ನಿರ್ಮಿಸಲು ಹೊರಟಿರುವ ಅಣೆಕಟ್ಟಿನಿಂದ ಪ್ರವಾಹ ಪರಿಸ್ಥಿತಿ ಹೆಚ್ಚಾಗಲಿದೆ ಎಂದು ಚೀನಾ ತಜ್ಞ ಎಚ್ಚರಿಸಿದ್ದಾರೆ. ಟೆಬೆಟ್ ಬಳಿ ನಿರ್ಮಿಸಿದರೆ ಪ್ರವಾಹ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ. 1325ರಿಂದ 2020ರವರೆಗೆ ಬ್ರಹ್ಮ ಪುತ್ರ ನದಿ ಹರಿವಿನಲ್ಲಾಗಿರುವ ಬದಲಾವಣೆಯನ್ನು ಅಧ್ಯಯನ ಮಾಡಿ ಈ ವರದಿ ತಯಾರುಮಾಡಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಹರಿವು ಹೆಚ್ಚಾಗಿದೆ ಎಂದಿದ್ದಾರೆ. ಹೀಗಾಗಿ ನದಿಯ ಹರಿವಿಗೆ ಅಡ್ಡಿಯುಂಟು ಮಾಡಿದರೆ ಭೂಕಂಪ, ಭೂಕುಸಿತ, ಪ್ರವಾಹ ಪರಿಸ್ಥಿತಿ ಹೆಚ್ಚಲಿದೆ ಎಂದಿದ್ದಾರೆ. ಟಿಬೆಟ್ ಹಾಗೂ ಹಿಮಾಲಯ ಪರ್ವತ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ನಡೆಯುವ ಕಾಮಗಾರಿ ಜಗತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ ಎಂದು ಪತ್ರಿಕಾ ಮೂಲಗಳು ವರದಿ ಮಾಡಿವೆ.
ಚೀನವನ್ನು ದಾಟಿದ ಬಳಿಕ ಬ್ರಹ್ಮಪುತ್ರ ನದಿ ಭಾರತ ಮತ್ತು ಪಾಕಿಸ್ತಾನದಲ್ಲಿ ಹರಿಯಲಿದ್ದು, ಭಾರತ ಹಾಗೂ ಬಾಂಗ್ಲಾಗಳು ಕೃಷಿಗಾಗಿ ಇದರ ನೀರನ್ನು ನೆಚ್ಚಿಕೊಂಡಿವೆ. ಒಂದು ವೇಳೆ ನದಿ ಹರಿವಿಗೆ ಅಡ್ಡಿಯಾದರೆ, ಅದು ತನ್ನ ದಿಕ್ಕನ್ನು ಬದಲಿಸುವ ಸಾಧ್ಯತೆಯಿದ್ದು, ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಬರ ಕಾಡುವ ಸಾದ್ಯತೆಯಿದೆ ಎಂದು ಮಾಧ್ಯಮಗಳು ಹೇಳಿವೆ.














