ಎಸ್‌ಐಟಿಗೆ ಮುಚ್ಚಿದ ಲಕೋಟೆ ನೀಡಿದ ಜಯಂತ್‌ ಟಿ.! ಸೌಜನ್ಯ ಕೇಸ್‌ ಮರುತನಿಖೆಗೆ ತಿರುವು ನೀಡಲಿದೆಯಾ ಲಕೋಟೆ!!

ಬೆಳ್ತಂಗಡಿ: ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಈ ಸಮಯದಲ್ಲಿ ಸಾಮಾಜಿಕ ಹೋರಾಟಗಾರ ಜಯಂತ್ ಟಿ ಅವರು ಎಸ್​ಐಟಿ ಕಚೇರಿಗೆ ಭೇಟಿ ನೀಡಿದ್ದು, ಮುಚ್ಚಿದ ಲಕೋಟೆಯೊಂದನ್ನು ನೀಡಿದ್ದಾರೆ. ಜಯಂತ್‌ ಎಸ್​ಐಟಿ ಕಚೇರಿಗೆ ತೆರಳಿದ ಸಂದರ್ಭ ಸುಧೀರ್ ಕುಮಾರ್ ರೆಡ್ಡಿ ಇಲ್ಲದ ಕಾರಣ, ಪೊಲೀಸ್ ಕಮಿಷನರ್ ಕಚೇರಿಗೆ ಬಂದು ಲಕೋಟೆ ನೀಡಿದ್ದಾರೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮುಚ್ಚಿದ ಲಕೋಟೆಯಲ್ಲಿ ಒಂದಿಷ್ಟು ಜನರ ಹೆಸರನ್ನು ಕೊಟ್ಟಿದ್ದೇನೆ. ಅವರಿಗೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಬಗ್ಗೆ ಮಾಹಿತಿ ಇದೆ. ಅವರು ಕೂಡ ಅದರಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಅವರನ್ನು ಸಾಕ್ಷಿ ಅಥವಾ ಆರೋಪಿಯನ್ನಾಗಿಸಿ ವಿಚಾರಣೆ ಮಾಡಬಹುದು. ದಕ್ಷ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರ ಕಚೇರಿಗೆ ಲಕೋಟೆ ಕೊಟ್ಟು ಅವರಿಗೆ ವಿಷಯ ತಿಳಿಸಿದ್ದೇನೆ. ಅವರನ್ನೆಲ್ಲಾ ಈ ಹಿಂದೆ ಪೊಲೀಸರು, ಸಿಐಡಿ, ಸಿಬಿಐ ತನಿಖೆ ಮಾಡಿಲ್ಲ ಹಾಗಾಗಿ ಅವರ ತನಿಖೆ ಮಾಡಿದರೆ ಸತ್ಯ ಹೊರಬರುತ್ತೆ’ ಎಂದು ಹೇಳಿದ್ದಾರೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page