ಇಂದು ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಮಸಮುದ್ರ ಶುದ್ಧಗಂಗಾ ಘಟಕದಲ್ಲಿ ಆಯುಧ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದru.
ಕಾರ್ಯಕ್ರಮದಲ್ಲಿ ಅರಸೀಕೆರೆ ತಾಲೂಕಿನ ಶುದ್ಧ ಗಂಗಾ ಮೇಲ್ವಿಚಾರಕ ದಯಾನಂದ ಮಾತನಾಡಿ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು ಹಾಗೂ ಊರಿನ ಎಲ್ಲಾ ಜನರಿಗೆ ಶುದ್ಧ ನೀರು ನೀಡಲಾಗುತ್ತಿದ್ದೂ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ನವ ಜೀವನ ಸದಸ್ಯ ಕೆಜಿ ಮಹೇಶ್ ಅವರು ಕ್ಷೇತ್ರದ ಬಗ್ಗೆ ಮಾತನಾಡಿ ಹತ್ತಾರು ಹಲವಾರು ಯೋಜನೆಗಳನ್ನ ತಂದು ಜನಗಳಿಗೆ ಸೌಲಭ್ಯವನ್ನು ನೀಡುತ್ತಾ ಬಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಹಳ ನೆಮ್ಮದಿ ಕೊಟ್ಟ ಬದುಕಾಗಿದೆ. ಕೆರೆಯ ಹೂಳೆತ್ತುವುದು ಬಡವರಿಗೆ ಮನೆ ಸಾಲ ಸೌಲಭ್ಯ ನಿರ್ಗತರಿಗೆ ಮಾಶಾಸನ ಈ ಎಲ್ಲವನ್ನು ಮಹೇಶ್ ಅವರು ಕ್ಷೇತ್ರದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಊರಿನ ಪ್ರಮುಖ ಹಾಗೂ ಪ್ರೇರಕಿ ಉಷಾ, ಸೇವಾಪ್ರತಿನಿಧಿ ಶೀಲಾ ಉಪಸ್ಥಿತರಿದ್ದರು.














