ಗುಜರಾತ್‌ನಲ್ಲಿ ಬರೋಬ್ಬರಿ 8 ಗಂಟೆ ಪವರ್‌ ಕಟ್!!‌ ರಾಷ್ಟ್ರಕ್ಕೇ ಮಾರಕವಾಗಲಿದೆ ವಿದ್ಯುತ್‌ ಕೊರತೆ!!

ದಸರಾ, ದೀಪಾವಳಿ ಸಮಯದಲ್ಲೇ ಗುಜರಾತ್‌ನಲ್ಲಿ ಭಾರೀ ವಿದ್ಯುತ್‌ ಸಮಸ್ಯೆ ಎದುರಾಗಿದೆ. ಅಗತ್ಯ ಪ್ರಮಾಣದ ವಿದ್ಯುತ್‌ ಲಭ್ಯತೆ ಇಲ್ಲದ ಕಾರಣ ನಿತ್ಯವೂ ರಾಜ್ಯದಲ್ಲಿ 8 ಗಂಟೆಗಳ ಕಾಲ ಪವರ್‌ ಕಟ್‌ ಮಾಡಲಾಗುತ್ತಿದೆ. ಇದು ಉದ್ಯಮಗಳ ಮೇಲೆ ಭಾರೀ ಗಂಭೀರ ಪರಿಣಾಮ ಬೀರಿದ್ದು, ನಿತ್ಯ 1000 ಕೋಟಿ ರು.ಗೂ ಹೆಚ್ಚಿನ ನಷ್ಟವಾಗುತ್ತಿದೆ ಉದ್ಯಮ ವಲಯ ಗೋಳು ತೋಡಿಕೊಂಡಿದೆ ಎಂದು ವರದಿಯಾಗಿದೆ.

Advertisement

ಜಾಗತಿಕ ಬಿಕ್ಕಟ್ಟು, ಗಗನಕ್ಕೇರಿರುವ ಕಲ್ಲಿದ್ದಲು, ಅನಿಲ ಬೆಲೆ, ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆಯಿಂದಾಗಿ ರಾಜ್ಯದಲ್ಲಿ ಅಗತ್ಯ ಪ್ರಮಾಣದ ವಿದ್ಯುತ್‌ ಉತ್ಪಾದನೆ ಆಗುತ್ತಿಲ್ಲ. ಮಾರುಕಟ್ಟೆಯಿಂದಲೂ ಅಗತ್ಯ ಪ್ರಮಾಣದ ವಿದ್ಯುತ್‌ ಸಿಗುತ್ತಿಲ್ಲ. ಜೊತೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್‌ ಬೇಡಿಕೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ಅ.16ರಂದು ರಾಜ್ಯದಲ್ಲಿ 574 ದಶಲಕ್ಷ ಯುನಿಟ್‌ ವಿದ್ಯುತ್‌ ಬಳಕೆಯಾಗಿದೆ. ಕಳೆದ ವರ್ಷ ಇದೇ ದಿನ 457 ದಶಲಕ್ಷ ಟನ್‌ ವಿದ್ಯುತ್‌ ಬಳಕೆಯಾಗಿತ್ತು. ಅಂದರೆ ಬಳಕೆಯಲ್ಲಿ ಶೇ.27ಕ್ಕೆ ಏರಿಕೆಯಾಗಿದೆ. ಆದರೂ ಅಗತ್ಯ ಪ್ರಮಾಣದ ವಿದ್ಯುತ್‌ ಪೂರೈಕೆ ಸಾಧ್ಯವಾಗದೇ ಸರ್ಕಾರ ನಿತ್ಯ 8 ಗಂಟೆ ವಿದ್ಯುತ್‌ ಕಡಿತ ಮಾಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Advertisement
Advertisement

ಹೀಗಾಗಿ ದಸರಾ, ದೀಪಾವಳಿ ವೇಳೆ ಬೇಡಿಕೆಗೆ ತಕ್ಕಷ್ಟು ಅಗತ್ಯ ವಸ್ತುಗಳ ಉತ್ಪಾದನೆ ಮಾಡಲಾಗದೇ ರಾಜ್ಯದ ಉದ್ಯಮಗಳು ಸಂಕಷ್ಟದಲ್ಲಿ ಸಿಕ್ಕಿವೆ. ಇಂಥ ಬೃಹತ್‌ ವಿದ್ಯುತ್‌ ಕಡಿತ ಕಳೆದ 15 ವರ್ಷಗಳಲ್ಲಿ ಮೊದಲನೆಯದ್ದಾಗಿದ್ದು, ರಾಜ್ಯದ ವಿವಿಧ ಉದ್ಯಮಗಳನ್ನು ನಂಬಿಕೊಂಡ 25 ಲಕ್ಷ ಕಾರ್ಮಿಕರ ಜೀವನಕ್ಕೆ ಅಡ್ಡಿ ಉಂಟು ಮಾಡಲಿದೆ. ಜೊತೆಗೆ ಉದ್ಯಮಗಳಿಗೆ ನಿತ್ಯ 1000 ಕೋಟಿ ರು.ನಷ್ಟ ಉಂಟಾಗುತ್ತಿದೆ ಎಂದು ಗುಜರಾತ್‌ನ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಮುಖ್ಯಮಂತ್ರಿಗೆ ಪತ್ರ ಬರೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page