ಮಂಗಳೂರು : ಜೂನ್ 26ರಂದು ನಕಲಿ ಪಾಸ್ ಪೋರ್ಟ್ ಪಡೆದು ಬಜಪೆ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಲು ಯತ್ನಿಸಿದ ಕಾಸರಗೋಡಿನ ಬೇವಿಂಜೆಯ ಆರೋಪಿ ವೇಲಾಯುಧನ್ (37) ಎಂಬಾತನನನ್ನು ಶ್ರೀ ಕೆ.ಎಂ ಚಂದ್ರಶೇಖರ್ ಇಮಿಗ್ರೇಷನ್ ಅಧಿಕಾರಿಗಳು, ಬಜಪೆ ವಿಮಾನ ನಿಲ್ದಾಣ ರವರು ವಶಕ್ಕೆ ಪಡೆದು ಬಜಪೆ ಠಾಣೆಗೆ ನೀಡಿದ ದೂರಿನಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 141/2010 ಕಲಂ: 419, 420, 468, ಜತೆಗೆ 34 ಐ.ಪಿ.ಸಿ & ಕಲಂ: 12(1)(b), (d), (e) ಪಾಸ್ ಪೋರ್ಟ್ ಆಕ್ಟ್-1967 ನಂತೆ ಪ್ರಕರಣ ದಾಖಲಾಗಿದ್ದು, ಅಂದಿನ ತನಿಖಾಧಿಕಾರಿಗಳು ಪ್ರಕರಣದ ತನಿಖೆಯನ್ನು ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದು, ಮಾನ್ಯ ಸೇಷನ್ಸ್ ನ್ಯಾಯಾಲಯವು ದಿನಾಂಕ:01-12-2020 ರಂದು ಆರೋಪಿಗೆ 1 ವರ್ಷ 6 ತಿಂಗಳ ಕಾಲ ಶಿಕ್ಷೆ ವಿಧಿಸಿದ್ದು, ನಂತರ ಆರೋಪಿ ವೇಲಾಯುಧನ್ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಕ್ರಿಮಿನಲ್ ರಿವಿಜನ್ ಪಿಟಿಷನ್ ನಂಬ್ರ: 104/2021 ರಂತೆ ಮೇಲ್ಮನವಿಯನ್ನು ಸಲ್ಲಿಸಿದ್ದು, ಮಾನ್ಯ ಉಚ್ಚ ನ್ಯಾಯಾಲಯವು ಆತನ ಮನವಿಯನ್ನು ತಿರಸ್ಕರಿಸಿರುತ್ತದೆ.
ನ್ಯಾಯಾಲಯವು ಆತನ ಮನವಿಯನ್ನು ತಿರಸ್ಕರಿಸಿದ ನಂತರ ಆರೋಪಿ ವೇಲಾಯುಧನ್ ದಸ್ತಗಿರಿ ಸಿಗದೇ ತಲೆ ಮರೆಸಿಕೊಂಡಿದ್ದವನನ್ನು ಆಗಸ್ಟ್ 08ರಂದು ಮಂಗಳೂರು ಉತ್ತರ ಉಪ ವಿಭಾಗದ ಎ.ಸಿ.ಪಿ ರವರ ತಂಡದವರು ವಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ ಬಜಪೆ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.














