“ಪುತ್ತೂರು ದಸರಾ 2026” | ಶಾರದಾ ಭಜನಾ ಮಂದಿರದ 92ನೇ ವರ್ಷದ ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ!

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 92ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ದಸರಾ ಪ್ರಯುಕ್ತ ಅ.11ರಂದು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

Advertisement


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಭಜನಾ ಮಂದಿರದಲ್ಲಿ ಶಾರದೋತ್ಸವ ನಡೆಯುತ್ತಿದೆ, ಅದೇ ಸಮಯದಲ್ಲಿ ಮಹಾಲಿಂಗೇಶ್ವರ ದೇವರಿಗೆ ಪೂಜೆ ನಡೆಯುತ್ತಿದೆ, ಇಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮಾಡುತ್ತಿರುವುದು ಹಲವು ವರ್ಷಗಳಿಂದ ಬಂದ ರೂಢಿಯಾಗಿದೆ. ಮುಂದಿನ ದಿನಗಳಲ್ಲಿ ಈ ಭಜನಾ ಮಂದಿರವು ಹೊಸತನ ಕಾಣಲಿ, ಇದಕ್ಕೆ ನಮ್ಮ ವ್ಯವಸ್ಥಾಪನಾ ಸಮಿತಿ ಬೆಂಬಲವಿದೆ, ಸಂಘಟನೆ ಯಾವುದಾದರೂ ಉzಶ ಮಾತ್ರ ಮಹಾಲಿಂಗೇಶ್ವರ ದೇವಸ್ಥಾನ, ಶಾರದಾ ಭಜನಾ ಮಂದಿರ ಜೀರ್ಣೋದ್ಧಾರವಾಗಬೇಕೆಂಬುದುದಾಗಿ ಎಂದು ಶುಭಹಾರೈಸಿದರು.

Advertisement
Advertisement

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಸ್ಥಾನದ ಮಾಜಿ ಆಡಳಿತ ಮುಕ್ತೇಸರ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಪುತ್ತೂರು ದಸರಾ ಪುತ್ತೂರು ತಾಲೂಕಿನವರಿಗೆ ಒಂದು ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮದ ನೀಡುವ ಮುಖಾಂತರ ಕೆದಂಬಾಡಿಗುತ್ತು ಸೀತಾರಾಮ ರೈಯವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಇದು ಹೀಗೆ ಮುಂದುವರಿಯಲಿ ಎಂದರು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯೆ ವೀಣಾ, ಬೊಳುವಾರು ಓಂ ಶಕ್ತಿ ಆಂಜನೇಯ ಮಂತ್ರಾಲಯದ ನೀಲಂತ್‌ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು.
ಪುತ್ತೂರು ಟಿ.ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷ ಕೃಷ್ಣಕುಮಾ‌ರ್ ರೈ ಕೆದಂಬಾಡಿಗುತ್ತು, ಮಂದಿರದ ಹಿರಿಯ ಸದಸ್ಯರಾದ ಕಿಟ್ಟಣ್ಣ ಗೌಡ, ಟಿ.ಎ.ಪಿ.ಸಿ.ಎಂ.ಎಸ್.ನ ಸದಸ್ಯ ಜಯರಾಮ ರೈ ಬಾಲಯ, ಶ್ರೀ ಮಹಾಲಿಂಗೇಶ್ವರ ಭಜನಾ ತಂಡ ಪುತ್ತೂರು ತಂಡದ ಪ್ರಭಾವತಿ, ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಭಜನಾ ಮಂದಿರದ ಅಧ್ಯಕ್ಷ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ ಈ ಕಾರ್ಯಕ್ರಮದ ನಾಯಕತ್ವ ಮಾತ್ರ ನನ್ನದು, ಇದರಲ್ಲಿ ಸಹಕಾರ ಎಲ್ಲರದ್ದೂ ಇದೆ, ಪದಾಧಿಕಾರಿಗಳು, ನಿತ್ಯಕರಸೇವಕರ ತಂಡದ ಸಹಕಾರ ಇರುವುದರಿಂದ ಕಳೆದ ೩ ವರ್ಷಗಳಿಂದ ವಿಜೃಂಭಣೆಯಿಂದ ನಡೆಯುತ್ತಿದೆ.
ಸರಿಯಾದ ಸಮಯಕ್ಕೆ ಗಣ್ಯ ವ್ಯಕ್ತಿಗಳು ಆಗಮಿಸಿ ಕಾರ್ಯಕ್ರಮ ಉದ್ಘಾಟನೆಗೊಳಿಸಿದ್ದಾರೆ. ಇಂತಹ ಕಾರ್ಯಕ್ರಮ ನಡೆಯಲು ಪುತ್ತೂರಿನ ಜನತೆಗೆ ಸಹಕಾರ ಅಗತ್ಯವಿದೆ. ಪುತ್ತೂರು ಶಾರದೋತ್ಸವ ಎಂಬುದನ್ನು ಪುತ್ತೂರು ದಸರಾ ಎಂಬ ನಾಮಾಂಕಿತದೊಂದಿಗೆ ಪುತ್ತೂರು ದಸರಾವಾಗಿ, ಮಡಿಕೇರಿ, ಮೈಸೂರಿನಲ್ಲಿ ಹೇಗೆ ದಸರಾ ಆಚರಣೆ ನಡೆಯುತ್ತದೆಯೋ ಹಾಗೆಯೇ ಪುತ್ತೂರಿನ ಸೀಮಾಧಿಪತಿ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಶಾರದಾ ಮಾತೆಯ ಭವ್ಯ ಭಜನಾ ಮಂದಿರದಲ್ಲಿ ನಡೆಯುವ ಈ ದಸರಾ ಮಹೋತ್ಸವ ಇಡೀ ರಾಷ್ಟ್ರಮಟ್ಟದಲ್ಲಿ ನಡೆಯಬೇಕೆಂಬುದು ನಮ್ಮ ಸಂಕಲ್ಪವಿದೆ. ಅದನ್ನು ಜಗನ್ಮಾತೆ ಈಡೇರಿಸಿಕೊಡುತ್ತಾರೆ ಎಂಬ ನಂಬಿಕೆಯಿದೆ. ಪುತ್ತೂರು ಜಾತ್ರೆಯ ಅವಭ್ರತ ಸಂದರ್ಭದಲ್ಲಿ ದಾರಿಯುದ್ದಕ್ಕೂ ನಡೆಯುವ ದೀಪಾಲಂಕಾರವನ್ನು ಜಗನ್ಮಾತೆಯ ಪುತ್ತೂರು ದಸರಾ ಸಂದರ್ಭದಲ್ಲೂ ನೀಡುತ್ತಿವೆ ಇದು ಈ ಪುತ್ತೂರು ದಸರಾದ ವಿಶೇಷ ಎಂಬುದಾಗಿ ಹೇಳಿ, ಧನ್ಯವಾದಗೈದರು. ಶೋಭಾಯಾತ್ರೆ ಸಂಚಾಲಕ ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು, ಶುಭಾ ರೈ ಸಹಕರಿಸಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page