ಫರಿದಾಬಾದ್: 30ಕ್ಕೂ ಅಧಿಕ ಜನರಿಗೆ ಕಚ್ಚಿದ್ದ, ₹51,000 ಇನಾಮು ಘೋಷಣೆಯಾಗಿದ್ದ ಕೋತಿಯನ್ನು ಸೆರೆಹಿಡಿಯುವಲ್ಲಿ ಹರಿಯಾಣದ ಜನ ಯಶಸ್ವಿಯಾಗಿದ್ದಾರೆ. ಪಲ್ವಾಲ್ ಜಿಲ್ಲೆಯ ಹಥಿನ್ ಪ್ರದೇಶದಲ್ಲಿ ಕೋತಿಯನ್ನು ಸೆರೆಹಿಡಿಯಲಾಗಿದ್ದು, ಹತಾಶೆಗೊಂಡ ಜನ ಕೋತಿಗೆ ಹೊಡೆಯುವುದನ್ನು ವಿಡಿಯೊ ತುಣುಕುಗಳಲ್ಲಿ ಕಾಣಬಹುದಾಗಿದೆ.
ಕೈಗಳನ್ನು ಕಟ್ಟಿಹಾಕಿರುವ ಕೋತಿಯನ್ನು ಹೆಗಲ ಮೇಲೆ ಹೊತ್ತು ವ್ಯಕ್ತಿಯೊಬ್ಬ ಸಾಗುತ್ತಿದ್ದು, ಹಿಂದೆ ಸಾಗುತ್ತಿರುವ ಜನ ಕೋತಿಯ ಕಪಾಳಕ್ಕೆ ಹೊಡೆಯುತ್ತಿರುವುದು ಮತ್ತು ಕೋಲಿನಿಂದ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಎತ್ತರದ ನೀರಿನ ಟ್ಯಾಂಕ್‌ನಿಂದ ಕೋತಿಯನ್ನು ಎಸೆದಿರುವ ದೃಶ್ಯ ಸಹ ಸೆರೆಯಾಗಿದೆ. ಕಳೆದ ಕೆಲ ದಿನಗಳಿಮದ ಕೋತಿಯು 30ಕ್ಕೂ ಅಧಿಕ ಜನರನ್ನು ಕಚ್ಚಿ ಗಾಯಗೊಳಿಸಿದೆ ಎಂದು ಹತಿನ್ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಲತಾ ಅವರ ಸಹಚರ ಸುಮಿತ್ ರಜಪೂತ್ ತಿಳಿಸಿದ್ದಾರೆ.
ರೇಣುಲತಾ ಅವರ ಸಹಚರ ಸುಮಿತ್ ರಜಪೂತ್ ತಿಳಿಸಿದ್ದಾರೆ. ಎಂದೂ ರಜಪೂತ್ ತಿಳಿಸಿದ್ದಾರೆ.














