ಬಲವಂತವಾಗಿ ಮತಾಂತರ ಮಾಡಿ ಮದುವೆ ಮಾಡಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಹಿಂದೂ ಬಾಲಕಿಯರನ್ನು ಪಾಕಿಸ್ಥಾನದ ಸಿಂಧ್ ಹೈಕೋರ್ಟ್ ರಕ್ಷಿಸಿದೆ ಎಂದು ತಿಳಿದಿದೆ.
14 ಮತ್ತು 13 ವರ್ಷದ ಇಬ್ಬರು ಬಾಲಕಿಯರಿಗೂ ತಮ್ಮ ಪೋಷಕರ ಮನೆಗೆ ತೆರಳಲು ಅನುಮತಿಸಿದೆ. ಆ. 29 ರಂದು ಈ ಇಬ್ಬರನ್ನು ಸಿಂಧ್ನ ತಂಡೋ ಅಲ್ಲಾಹ್ಯಾರ್ನಲ್ಲಿ ಅಪಹರಿಸಿ, ಮತಾಂತರ ಮಾಡಿ, ಅವರಿಗಿಂತ ಹೆಚ್ಚು ವಯಸ್ಸಾದವರ ಜೊತೆ ವಿವಾಹ ಮಾಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸಿಂಧ್ ಕೋರ್ಟ್ನ ಹೈದರಾಬಾದ್ ಪೀಠ, ಇಬ್ಬರೂ ಸಹೋದರಿಯರು ಅವರ ಕುಟುಂಬ ಸೇರಲು ಅವಕಾಶ ನೀಡಿತ್ತು. ಪಾಕಿಸ್ಥಾನದಲ್ಲಿರುವ ಹಿಂದೂ ಸಂಘಟನೆ ಇಬ್ಬರು ಸಹೋದರಿಯರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.














