ICC Rankings: ಟಿ20 ವಿಶ್ವಕಪ್​ನಲ್ಲಿ ಸಿಡಿಲಬ್ಬರ; ಬರೋಬ್ಬರಿ 17 ಸ್ಥಾನ ಮೇಲೇರಿದ ಇಶಾನ್ ಕಿಶನ್

ICC Rankings: 2026ರ ಟಿ20 ವಿಶ್ವಕಪ್ ಸಂದರ್ಭದಲ್ಲಿ ಐಸಿಸಿ ತನ್ನ ಇತ್ತೀಚಿನ ಟಿ20 ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಅಭಿಷೇಕ್ ಶರ್ಮಾ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದರೆ, ಇಶಾನ್ ಕಿಶನ್ ಟಾಪ್ 10 ರೊಳಗೆ ಪ್ರವೇಶಿಸಿದ್ದಾರೆ. ಬೌಲರ್‌ಗಳಲ್ಲಿ ವರುಣ್ ಚಕ್ರವರ್ತಿ ಅಗ್ರಸ್ಥಾನದಲ್ಲಿದ್ದಾರೆ. ಈ ನೂತನ ಪಟ್ಟಿಯಲ್ಲಿ ಹಲವು ಪ್ರಮುಖ ಆಟಗಾರರು ತಮ್ಮ ಸ್ಥಾನಗಳನ್ನು ಬದಲಾಯಿಸಿದ್ದು, ವಿಶ್ವಕಪ್ ಪ್ರದರ್ಶನವನ್ನು ಪ್ರತಿಬಿಂಬಿಸುತ್ತದೆ.

2026 ರ ಟಿ20 ವಿಶ್ವಕಪ್ ನಡುವೆ ಐಸಿಸಿ, ಇತ್ತೀಚಿನ ಟಿ20 ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ನೂತನ ಪಟ್ಟಿಯಲ್ಲಿ ಟೀ ಇಂಡಿಯಾದ ಹೊಸ ಆರಂಭಿಕ ಆಟಗಾರ ಇಶಾನ್ ಕಿಶನ್ ಟಿ20 ವಿಶ್ವಕಪ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ.

Advertisement

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page