ನವದೆಹಲಿ : ದೇಶಾದ್ಯಂತ 20,000 ಕೋಟಿ ರೂಪಾಯಿ ಮೌಲ್ಯದ ಸಂಚಾರ ನಿಯಮ ಉಲ್ಲಂಘನೆಯ (ಇ-ಚಲನ್) ದಂಡ ವಸೂಲಿಯಾಗದೆ ಬಾಕಿ ಉಳಿದಿರುವುದರಿಂದ ಗರಂ ಆಗಿರುವ ಸುಪ್ರೀಂ ಕೋರ್ಟ್, ಬಾಕಿ ಉಳಿದಿರುವ ಇ-ಚಲನ್ಗಳನ್ನು ವಿದ್ಯುತ್ ಬಿಲ್ಗಳಿಗೆ ಲಿಂಕ್ ಮಾಡಿ ದಂಡ ವಸೂಲಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೋಮವಾರ ಮಹತ್ವದ ನಿರ್ದೇಶನ ನೀಡಿದೆ.
ಸಂಚಾರ ನಿಯಮಗಳ ಜಾರಿಗೆ ಸಂಬಂಧಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜೆ. ಬಿ. ಪರ್ದೀವಾಲಾ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ, ‘ಜನರು ಟ್ರಾಫಿಕ್ ಚಲನ್ ದಂಡವನ್ನು ಪಾವತಿಸದಿದ್ದರೆ, ಅದನ್ನು ಅವರ ವಿದ್ಯುತ್ ಬಿಲ್ಗೆ ಸೇರಿಸಿ. ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಭಯದಿಂದ ಅವರು ಬಿಲ್ ಪಾವತಿಸಲೇಬೇಕಾಗುತ್ತದೆ. ಈ ದೇಶದಲ್ಲಿ, ಇಂಥ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲೇಬೇಕು’ ಎಂದಿತು.
ದೇಶಾದ್ಯಂತ ಒಟ್ಟು 45,000 ಕೋಟಿ ರು. ಮೌಲ್ಯದ ಇ-ಚಲನ್ಗಳಲ್ಲಿ ಇದುವರೆಗೆ ಸುಮಾರು 25,000 ಕೋಟಿ ರು. ಮಾತ್ರ ವಸೂಲಾಗಿದ್ದು, ಇನ್ನೂ 20,000 ಕೋಟಿ ರು. ಬಾಕಿ ಉಳಿದಿದೆ.














