ಇನ್‌ಸ್ಟಾಗ್ರಾಂ ಪ್ರೀತಿ! ಹಿಂದೂ ಸಂಪ್ರದಾಯದಂತೆ ವಿವಾಹ!! ಮದುವೆಯಾದ ಮೇಲೆ ಮತಾಂತರಕ್ಕೆ ಒತ್ತಾಯ! ಇದು ಜಾನಿ ಜಾವೇದ್‌ ಆಗಿ ಬದಲಾದ ಕಥೆ!!

ಹರಿಯಾಣದ ಸೋನಿಪತ್‌ನ ಮಹಿಳೆಗೆ ಇನ್‌ಸ್ಟಾಗ್ರಾಂ ಮೂಲಕ ಸ್ನೇಹಿತನಾಗಿ, ಬಳಿಕ ಹಿಂದೂ ಸಂಪ್ರದಾಯದಂತೆ ವಿವಾಹವಾದ ವ್ಯಕ್ತಿ ತನ್ನ ಧಾರ್ಮಿಕ ಗುರುತು ಹಾಗೂ ಮೊದಲಿನ ವಿವಾಹವನ್ನು ಮರೆಮಾಚಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.. ವಿವಾಹದ ನಂತರ ಪತಿ ಕಿರುಕುಳ ನೀಡಿದ್ದು ಮಾತ್ರವಲ್ಲದೇ, ಮತಾಂತರವಾಗುವಂತೆ ಒತ್ತಡ ಹಾಕಿದ್ದಾನೆ ಎಂದು ದೂರು ದಾಖಲಿಸಲಾಗಿದೆ.

Advertisement

ವ್ಯಕ್ತಿಯು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ತನ್ನನ್ನು ‘ಜಾನಿ’ ಎಂದು ಪರಿಚಯಮಾಡಿಕೊಂಡಿದ್ದ ಹಿಂದೂ ಎಂದು ಹೇಳಿಕೊಂಡಿದ್ದ. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ, ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ಜೀವನ ನಡೆಸುತ್ತಿದ್ದೆವು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಪತಿಯ ನಿಜವಾದ ಗುರುತು ವಿವಾಹವಾದ ಸುಮಾರು ಆರು ತಿಂಗಳ ಬಳಿಕ ತಿಳಿಯಿತು ಎಂದು ಮಹಿಳೆ ಆರೋಪಿಸಿದ್ದಾಳೆ. ಪತಿಯ ಬ್ಯಾಗ್‌ನಲ್ಲಿ ‘ಜಾವೇದ್ ಖಾನ್’ ಎಂಬ ಹೆಸರಿನ ಆಧಾರ್ ಕಾರ್ಡ್ ಪತ್ತೆಯಾಯಿತು. ನಂತರ ತಾನು ‘ಜಾನಿ’ ಎಂದು ತಿಳಿದಿದ್ದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಾವೇದ್ ಖಾನ್ ಹಾಗೂ ಆತ ಈಗಾಗಲೇ ವಿವಾಹವಾಗಿದ್ದಾನೆ ಎಂಬುದು ತಿಳಿದು ಬಂತು ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

ಸೋನಿಪತ್ ನಿವಾಸಿಯಾಗಿರುವ ಜಾವೇದ್ ಖಾನ್ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದು, ಮೊದಲ ಪತ್ನಿಯಿಂದ ಮೂವರು ಮಕ್ಕಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಈ ನಡುವೆ ದಂಪತಿ ವಾಸಿಸುತ್ತಿದ್ದ ಸ್ಥಳಕ್ಕೆ ಜಾವೇದ್ ಖಾನ್‌ನ ಮೊದಲ ಪತ್ನಿ ಬಂದಿದ್ದು, ತನ್ನೊಂದಿಗೆ ವಾಗ್ವಾದ ನಡೆಸಿ ಜಾವೇದ್‌ನ್ನು ಕರೆದೊಯ್ದಳು ಎಂದು ಮಹಿಳೆ ತಿಳಿಸಿದ್ದಾಳೆ. ಕೆಲ ದಿನಗಳ ಬಳಿಕ ಜಾವೇದ್ ಮರಳಿ ಬಂದಿದ್ದು, ತನ್ನೊಂದಿಗೆ ಮುಂದುವರಿದು ಜೀವನ ನಡೆಸದಂತೆ ಕುಟುಂಬದವರು ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದ್ದಾಗಿ ಮಹಿಳೆ ಆರೋಪಿಸಿದ್ದಾಳೆ. ಆದರೂ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದು, ಉತ್ತರ ಪ್ರದೇಶಕ್ಕೆ ತೆರಳಿ ಬುಢಾನಾದಲ್ಲಿ ವಾಸಿಸುತ್ತಿದ್ದ ವೇಳೆ ನಮಗೆ ಮಗುವೊಂದು ಜನಿಸಿತು ಎಂದು ಮಹಿಳೆ ಹೇಳಿದ್ದಾಳೆ. ನಂತರ ಸೋನಿಪತ್‌ಗೆ ಮರಳಿ ಬಂದು ಅಲ್ಲಿಯೇ ವಾಸಿಸುತ್ತಿರುವುದಾಗಿ ತಿಳಿಸಿದ್ದಾಳೆ.

ಕಳೆದ ಒಂದು ವಾರದಿಂದ ಪತಿ ಹಾಗೂ ಆತನ ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿರುವ ಮಹಿಳೆ, ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾಳೆ. ನಾನು ಮತ್ತು ಮಗುವನ್ನು ಮತಾಂತರವಾಗುವಂತೆ ಒತ್ತಡ ಹೇರಲಾಗುತ್ತಿದೆ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ. ಪತಿ ಮತ್ತು ಆತನ ಕುಟುಂಬದವರು ತನ್ನ ಗುರುತನ್ನು ಮರೆಮಾಚಿದ್ದು, ಹಲ್ಲೆ, ಕಿರುಕುಳ ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾಳೆ. ಹಿಂದೂ ರಕ್ಷಾ ಸೇನಾ ಸಂಘಟನೆಯ ಪ್ರತಿನಿಧಿಯೊಬ್ಬರೂ ಈ ವಿಚಾರವನ್ನು ಪ್ರಸ್ತಾಪಿಸಿ ಮಹಿಳೆಯ ದೂರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಿಳೆ ಹಾಗೂ ಸಂಘಟನೆಯ ಪ್ರತಿನಿಧಿ ಆರೋಪಗಳ ಕುರಿತು ಮಾತನಾಡಿದ್ದಾರೆ.
ಮಹಿಳೆಯಿಂದ ದೂರು ಸ್ವೀಕರಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆಸಲಾಗಿದೆ. ಮಹಿಳೆ ಮಾಡಿರುವ ಆರೋಪಗಳು ಇನ್ನೂ ತನಿಖೆಯಿಂದ ದೃಢಪಟ್ಟಿಲ್ಲ. ಪೊಲೀಸ್ ತನಿಖೆಯ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಜಾಲತಾಣ ಮಾಧ್ಯಮಗಳು ವರದಿ ಮಾಡಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page