ಸರ್ಕಾರಿ ಆಸ್ತಿ-ಪಾಸ್ತಿಗೆ ಹಾನಿ ಮಾಡಿದರೇ ಪೋಷಕರೇ ನಷ್ಟ ಭರಿಸಬೇಕು!! ಇಟಲಿಯಲ್ಲಿ ಜೆನ್‌-ಝೀಗಳಿಗೆ ಸರ್ಕಾರದ ಎಚ್ಚರಿಕೆ!!

ರೋಮ್: ಇಟಲಿಯಲ್ಲಿ ಪ್ರತಿಭಟನೆ ವೇಳೆ ಸಾರ್ವಜನಿಕ ಸ್ಥಳಗಳಿಗೆ, ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಕಠಿಣ ಕ್ರಮವನ್ನು ಜಾರಿ ಮಾಡಲಾಗಿದೆ. ಒಂದು ವೇಳೆ ಈ ಕೃತ್ಯದಲ್ಲಿ ಅಪ್ರಾಪ್ತ ವಯಸ್ಕರು ಭಾಗಿಯಾಗಿದ್ದಲ್ಲಿ ಅವರ ಪೋಷಕರು ನಷ್ಟವನ್ನು ಭರಿಸಿಕೊಡಬೇಕು ಎಂದು ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರ ಘೋಷಿಸಿದೆ ಎಂದು ತಿಳಿದು ಬಂದಿದೆ.

Advertisement

ಇತ್ತೀಚೆಗೆ ಜೀವನ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವು ದರ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಸಾಕಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿ ನಾಶವಾಗಿದ್ದು, ಅಂಗಡಿ-ಮುಂಗಟ್ಟುಗಳಲ್ಲಿ ಪ್ರತಿಭಟನಾಕಾರರು ಲೂಟಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಲೋನಿ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ.
ಈ ಬಗ್ಗೆ ಮಂಗಳವಾರ ಘೋಷಣೆ ಮಾಡಿರುವ ಮೆಲೋನಿ, ಸಾರ್ವಜನಿಕ ಆಸ್ತಿ ನಾಶ ಹಾಗೂ ಲೂಟಿಯನ್ನು ಪ್ರತಿಭಟನೆಯ ಭಾಗ ಎಂದು ಹೇಳಲಾಗುವುದಿಲ್ಲ. ಅದು ಎಂದಿಗೂ ಅಪರಾಧವೇ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೆಲೋನಿ, ‘ಪ್ರತಿಭಟನೆ ಮಾಡುವುದು ಹಕ್ಕು. ಆದರೆ ನಮ್ಮ ನಗರಗಳನ್ನು ನಾಶ ಮಾಡುವುದಲ್ಲ’ ಎಂದಿದ್ದಾರೆ. ನೂತನ ನಿಯಮಗಳ ಪ್ರಕಾರ, 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪಿನಲ್ಲಿ ಪ್ರತಿಭಟನೆ ವೇಳೆ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟು ಮಾಡುವ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗವಹಿಸಿದರೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 20,000 ಪೌಂಡ್ಸ್ (25,26,734 ರೂ.) ದಂಡ ವಿಧಿಸಲಾಗುತ್ತದೆ.
ಅಪ್ರಾಪ್ತ ವಯಸ್ಸಿನ ಮಕ್ಕಳು ಅಂಗಡಿಗಳ ಗಾಜು ಒಡೆಯುವುದು ಅಥವಾ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಮುಂತಾದ ಕೃತ್ಯಗಳಲ್ಲಿ ತೊಡಗಿದರೆ, ಹಾನಿಯ ಪರಿಹಾರವನ್ನು ಅವರ ಪೋಷಕರು ಭರಿಸಬೇಕು. ಅಪಾಯ ಉಂಟು ಮಾಡುವುದಕ್ಕೆ ಸಾಕ್ಷ್ಯವಿದ್ದರೆ, ಅಪರಾಧ ಸಾಬೀತಾಗುವ ಮುನ್ನವೇ 14- 17 ವರ್ಷದ ಯುವಕರನ್ನು ಪೊಲೀಸರು ವಶಕ್ಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Advertisement
Advertisement

ಇದೇ ವೇಳೆ, ಮಿಲಾನ್‌ನಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಈ ನಗರದಲ್ಲಿ ಪೊಲೀಸರ ಜತೆಗೆ 500 ಸೈನಿಕರನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಈ ನಿಯೋಜನೆ 2026ರ ಅಂತ್ಯ ದವರೆಗೆ ಇರಲಿದೆ ಎಂದು ವರದಿಯಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page