700 ಕೋಟಿ ದಾಟಿದ ಮೊದಲ ತಮಿಳು ಚಿತ್ರ! ಹೊಸ ಇತಿಹಾಸ ಸೃಷ್ಟಿಸಿದ ಜೈಲರ್‌ 2 ಸಿನೆಮಾ!!

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಜೋಡಿಯ ‘ಜೈಲರ್ 2’ ಚಿತ್ರವು ಚಿತ್ರಮಂದಿರಗಳಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಭರ್ಜರಿ ಗಳಿಕೆ ಕಾಣುವ ಮೂಲಕ ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಐತಿಹಾಸಿಕ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಭಾನುವಾರ ಒಂದೇ ದಿನ ಜಾಗತಿಕವಾಗಿ 44 ಕೋಟಿಗೂ ಹೆಚ್ಚು ಹಣ ಬಾಚುವ ಮೂಲಕ 800 ಮತ್ತು 900 ಕೋಟಿ ಮೈಲಿಗಲ್ಲುಗಳತ್ತ ಮುನ್ನುಗ್ಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

11ನೇ ದಿನವಾದ ಭಾನುವಾರ ಭಾರತದಲ್ಲಿ ಈ ಸಿನಿಮಾ 25.70 ಕೋಟಿ ಗಳಿಕೆ ಕಂಡಿದೆ. ಇದರೊಂದಿಗೆ ದೇಶಿಯವಾಗಿ ಚಿತ್ರದ ಒಟ್ಟು ಗಳಿಕೆ 398 ಕೋಟಿ ತಲುಪಿದೆ. ಶೀಘ್ರದಲ್ಲೇ ಭಾರತದಲ್ಲೇ 400 ಕೋಟಿ ಗಳಿಸಿದ ʼಜೈಲರ್‌ 1ʼ ಹಾಗೂ ವಿಜಯ್‌ ಅವರ ʼಲಿಯೋʼ ಸಾಲಿಗೆ ಇದು ಸೇರ್ಪಡೆಯಾಗಲಿದೆ. ಭಾರತದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ʼಜೈಲರ್‌ 2ʼ ಅಧಿಪತ್ಯ ಸಾಧಿಸಿದೆ. 11ದಿನಗಳಲ್ಲಿ ವಿದೇಶದಿಂದ ಸುಮಾರು 243.50 ಕೋಟಿ ಗಳಿಸಿದ್ದು, ಚಿತ್ರದ ಜಾಗತಿಕ ಒಟ್ಟು ಗಳಿಕೆ ಬರೋಬ್ಬರಿ 710 ಕೋಟಿಗೆ ತಲುಪಿದೆ. 700 ಕೋಟಿ ಗಡಿ ದಾಟಿದ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಜೈಲರ್ 2’, ಭಾರತದಾದ್ಯಂತ ಈ ಸಾಧನೆ ಮಾಡಿದ 18ನೇ ಸಿನಿಮಾ ಹಾಗೂ ದಕ್ಷಿಣ ಭಾರತದ 7ನೇ ಚಿತ್ರವಾಗಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page