ಕುಡ್ಲ ಉದ್ಯೋಗ ಮೇಳ 2026!ಕನಸಿನ ಉದ್ಯೋಗ ನಿಮ್ಮದಾಗಿಸಿಕೊಳ್ಳಿ…

ಮಂಗಳೂರು: ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ವತಿಯಿಂದ ಸೆ. 20ರಂದು ನಗರದ ಕದ್ರಿ ಪಾರ್ಕ್‌ ಸಮೀಪದ ಶ್ರೀ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಕುಡ್ಲ ಉದ್ಯೋಗ ಮೇಳ 2026 ಆಯೋಜಿಸಲಾಗಿದೆ.
ಉದ್ಯೋಗ ಮೇಳ ಸರ್ವರಿಗೂ ಮುಕ್ತವಾಗಿದ್ದು, 50ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಲಿವೆ. ಬೇರೆ ಬೇರೆ ಕ್ಷೇತ್ರಗಳಲ್ಲಿ 850 ಉದ್ಯೋಗವಕಾಶಗಳಿವೆ. ಐಟಿ, ಸಾಫ್ಟ್ ವೇರ್‌, ಅಟೋಮೊಬೈಲ್‌, ಬ್ಯಾಂಕಿಂಗ್‌, ವಿಮೆ, ಶಿಕ್ಷಣ, ರಿಟೈಲ್‌, ಹೆಲ್ತ್ ಕೇರ್‌, ರಿಯಲ್‌ ಎಸ್ಟೇಟ್‌ ವಿಭಾಗಗಳಲ್ಲಿ ಉದ್ಯೋಗಾವಕಾಶ ಲಭ್ಯವಿದೆ ಎಂದು ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಕಾರ್ಯದರ್ಶಿ ಯೋಗಿ ವರದರಜ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement


ಈಗಾಲೇ 750ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದೂ, ವಿದ್ಯಾಭ್ಯಾಸ ಪೂರೈಸಿದ ಯಾರು ಬೇಕಾದರೂ ಭಾಗವಹಿಸಬಹುದು. ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ. ಮೇಳದಲ್ಲಿ 1000 ಮಂದಿ ಅಭ್ಯಾರ್ಥೀಗಳು ಭಾಗವಹಿಸುವ ನಿರೀಕ್ಷೆಯಿದೆ.
ಅನ್ ಲೈನ್‌ ನೋಂದಣಿಗೆ https://forms.gle/YQV1mJLbvvkdXXU3A ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕಿರಣ್ ಕುಮಾರ್‌ ಜೋಗಿ, ಜತೆ ಕಾರ್ಯದರ್ಶಿ ಸುನಂದಾ ಸುರೇಶ್‌, ಸಾಂಸ್ಕ್ರತಿಕ ಕಾರ್ಯದರ್ಶಿ ಹರೀಶ್ ಕುಮಾರ್ ಜೋಗಿ, ಕೋಶಾಧಿಕಾರಿ ಎಲ್.‌ಯಶವಂತ ಕುಮಾರ್‌ ಉಪಸ್ಥಿತರಿದ್ದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page