ಕನ್ನಡದ ಖ್ಯಾತ ನಿರ್ಮಾಪಕ ಸಿಲ್ಕ್‌ ಮಂಜು ಇನ್ನಿಲ್ಲ! ಉಪೇಂದ್ರ ಅಭಿನಯದ “ಎ” ಸಿನೆಮಾ ನಿರ್ಮಾಪಕ!!

ರಿಯಲ್‌ಸ್ಟಾರ್‌ ಉಪೇಂದ್ರ ಅವರ ಮೊದಲ ಸಿನಿಮಾ‘ಎ’ಮೂಲಕ ಕನ್ನಡ ಚಿತ್ರ ರಂಗದ ನಿರ್ಮಾಪಕ ಬಿ.ಜಿ. ಮಂಜುನಾಥ್‌ ನಿಧನರಾದರು. ಇಂಡಸ್ಟ್ರಿಯಲ್ಲಿ ಅವರನ್ನು ಸಿಲ್ಕ್ ಮಂಜು ಎಂದೇ ಕರೆಯುತ್ತಿದ್ದರು. ಅನಾರೋಗ್ಯದಿಂದ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ‘ಎʼ, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ಪ್ರತ್ಯರ್ಥ’, ‘ಸೂರ್ಯಕಾಂತಿ’, ‘ಹಗಲುವೇಷ’, ‘ಸೈಕಿಕ್’, ‘ಟೆರರ್’ಸಿನಿಮಾಗಳನ್ನ ಸಿಲ್ಕ್ ಮಂಜು ಅವರು ನಿರ್ಮಾಣಮಾಡಿದ್ದರು. ಮಂಗಳವಾರ (ಅಕ್ಟೋಬರ್ 27) ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ಖಾಸಗಿ ವಾಹಿನಿ ಒಂದಕ್ಕೆ ಇತ್ತೀಚೆಗೆ ಅವರ ಸೊಸೆ ಆಶಾ ಅವರು ನೀಡಿದ್ದ ಹೇಳಿಕೆ ಪ್ರಕಾರ, ‘ಟೆರರ್’ ಎಂಬ ಸಿನಿಮಾವನ್ನು 8ಕೋಟಿ ಖರ್ಚುಮಾಡಿ, ನಿರ್ಮಾಣಮಾಡಿದ್ದರು. ಇದರಲ್ಲಿ 2 ರಿಂದ 3 ಕೋಟಿ ರೂಪಾಯಿ ಸಾಲ ಮಾಡಿದ್ದರು, ಹಾಗೇ ಮನೆ ಕೂಡ ಅಡ ಇಟ್ಟಿದ್ದರು ಎಂದಿದ್ದಾರೆ. ಆದರೆ, ಸಿನಿಮಾದ ಬಿಡುಗಡೆಯಿಂದ ಒಂದು ರೂಪಾಯಿ ಹಣ ಕೂಡ ಅವರ ಕೈಗೆ ದಕ್ಕಲಿಲ್ಲ, ಸಿನಿಮಾ ಫ್ಲಾಪ್ ಆಯ್ತು. ಈ ವಿಚಾರವನ್ನ ಬಹಳ ಮನಸ್ಸಿಗೆ ಹಚ್ಚಿ ಕೊಂಡಿದ್ದರು. ಅವರ ಆರೋಗ್ಯ ಕ್ಷೀಣಿಸಲು ಮುಖ್ಯ ಕಾರಣ ಸಿನಿಮಾದ ಸಾಲ. ಇದರಿಂದ ಕೊರಗುತ್ತಿದ್ದ ಮಾವ (ಮಂಜು) ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಕೈಯಲ್ಲಿದ್ದ ಹಣಕೂಡ ಆಸ್ಪತ್ರೆಗೆ ಖರ್ಚಾಗಿತ್ತು, ಎಲ್ಲಾ ರೀತಿಯಲ್ಲಿಯೂ ಪ್ರಯತ್ನ ಪಟ್ಟಿದ್ದೀವಿ” ಎಂದು ಸೊಸೆ ಆಶಾ ಅವರು ಹೇಳಿದ್ದರು.

Advertisement
Advertisement

ಸಿಲ್ಕ್ ಮಂಜು ಅವರ ಆಸ್ಪತ್ರೆಗೆ ದಾಖಲಾದಾಗ ಖರ್ಚು ಭರಿಸಲು ಸಾಧ್ಯವಾಗದೇ ಸಹಾಯ ಬಯಸಿತ್ತು ಕುಟುಂಬ. ಆದರೆ, ಅದು ಯಾವುದೂ ವರ್ಕ್ ಆಗಿಲ್ಲ. ಇಬ್ಬರು ಮಕ್ಕಳು, ಸೊಸೆಯಂದಿರು ಹಾಗೂ ಕುಟುಂಬವನ್ನು ಅಗಲಿದ್ದಾರೆ. ಸೊಸೆ ಆಶಾ ಅವರು 8 ತಿಂಗಳ ಗರ್ಭಿಣಿ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page