ಬೆದರಿಕೆಗೆ ಮಣಿಯಿತೇ ಕಾಂಗ್ರೆಸ್‌ ಸರ್ಕಾರ??!! ಲಂಚ ಪಡೆದ ಶಾಸಕರ ಹೆಸರು ಬಹಿರಂಗಪಡಿಸುತ್ತೇವೆ ಎಂದು ಎಚ್ಚರಿಸಿದ ಬೆನ್ನಲ್ಲೇ 2400 ಕೋಟಿ ರಿಲೀಸ್‌ ಮಾಡಿದ ರಾಜ್ಯ ಸರ್ಕಾರ!

ಬೆಂಗಳೂರು : ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ 38 ಸಾವಿರ ಕೋಟಿ ರೂಪಾಯಿ ಹಣವನ್ನು ನವೆಂಭರ್‌ ಅಂತ್ಯದ ಒಳಗಾಗಿ ರಿಲೀಸ್‌ ಮಾಡಬೇಕು, ಇಲ್ಲದೇ ಇದ್ದಲ್ಲಿ ಲಂಚ ಪಡೆದಿರುವ ಹಾಗೂ ಲಂಚಕ್ಕೆ ಬೇಡಿಕೆ ಇಟ್ಟ ಶಾಸಕರ ಹೆಸರನ್ನು ಬಹಿರಂಗ ಮಾಡುತ್ತೇವೆ ಎಂದು ಗುತ್ತಿಗೆದಾರರ ಸಂಘ ಎಚ್ಚರಿಸಿದ ಬೆನ್ನಲ್ಲೇ ಸರ್ಕಾರ 2400 ಕೋಟಿ ರೂಪಾಯಿ ಹಣ ರಿಲೀಸ್‌ ಮಾಡಿದೆ.

Advertisement

ರಾಜ್ಯದಲ್ಲಿ ಸಲ್ಲಿಕೆಯಾಗದೆ ಬಾಕಿಯಿರುವ ಸುಮಾರು ₹38,000 ಕೋಟಿ ಬಿಲ್ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರ ಸಂಘವು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ, ಕರ್ನಾಟಕ ಸರ್ಕಾರವು ಕಳೆದ 3 ದಿನಗಳಲ್ಲಿ ನೀರಾವರಿ ಇಲಾಖೆಗೆ ₹2,400 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.

Advertisement
Advertisement

ಗುತ್ತಿಗೆದಾರರ ಸಂಘವು ಎರಡು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿಗಳಿಗೆ ಸುದೀರ್ಘ ಪತ್ರ ಬರೆದು ತಮ್ಮ ಅಳಲನ್ನು ತೋಡಿಕೊಂಡಿತ್ತು. ಅತ್ಯಂತ ಹೆಚ್ಚಿನ ಪ್ರಮಾಣದ ಬಾಕಿ ಬಿಲ್ ಹೊಂದಿರುವ ನೀರಾವರಿ ಇಲಾಖೆಗೆ ಸರ್ಕಾರವು ಮೊದಲು ₹1,400 ಕೋಟಿ ಕಾಯ್ದಿರಿಸಿತ್ತು. ಆದರೆ, ಪ್ರಸ್ತುತ ಬಿಡುಗಡೆಯಾಗಿರುವ ಈ ಮೊತ್ತವು ಒಟ್ಟು ಬಾಕಿಯ ಶೇಕಡಾ 10 ಕ್ಕಿಂತಲೂ ಕಡಿಮೆಯಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವ ಗುತ್ತಿಗೆದಾರರಿಗೆ ಈ \ ಪರಿಹಾರದಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಗುತ್ತಿಗೆದಾರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಸಂಘದ ರಾಜ್ಯಾಧ್ಯಕ್ಷ ಆರ್‌. ಮಂಜುನಾಥ್‌ ಮಾತನಾಡಿ, “3-4 ತಿಂಗಳಿಗೊಮ್ಮೆ ಹೀಗೆ ಸಣ್ಣ ಮೊತ್ತ ನೀಡಿದರೆ ಏನು ಪ್ರಯೋಜನ? ಬಾಕಿ ಇರುವ ಇಡೀ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಿ ಆ ನಂತರ ಸರ್ಕಾರ ತನಗೆ ಬೇಕಾದ ನಿರ್ಧಾರಗಳನ್ನು ಕೈಗೊಳ್ಳಲಿ” ಎಂದು ಆಗ್ರಹಿಸಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page