ಹೊಸತನಕ್ಕೆ ಮುನ್ನುಡಿ ಬರೆದ ಪುತ್ತೂರು ದಸರಾ! ಶಾರದಾ ಮಂದಿರದಲ್ಲಿ ಕೃತಜ್ಞತಾ ಸಭೆ ಹಾಗೂ ಸಹಭೋಜನ!! ಅಭೂತಪೂರ್ವ ಯಶಸ್ಸಿನೊಂದಿಗೆ ಈ ಬಾರಿಯ ದಸರಾ ಮುಕ್ತಾಯ!!

ಪುತ್ತೂರು : ಇಲ್ಲಿನ ಶಾರದಾ ಭಜನಾ ಮಂದಿರದ ಆಶ್ರಯದಲ್ಲಿ ನಡೆದಿದ್ದ ಪುತ್ತೂರು ದಸರಾ ಅಭೂತಪೂರ್ವ ಯಶಸ್ಸಿನೊಂದಿಗೆ ಸಂಪನ್ನಗೊಂಡಿದೆ.

Advertisement

ಈ ನಿಟ್ಟಿಲ್ಲಿ ಕೃತಜ್ಞತಾ ಸಭೆ ಹಾಗೂ ಸಹಭೋಜನ ಅ. 23ರಂದು ಸಂಜೆ ಶಾರದಾ ಭಜನಾ ಮಂದಿರದ ಆವರಣದಲ್ಲಿ ಸಮಿತಿಯ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಂದಿರದ ಪದಾಧಿಕಾರಿಗಳು, ಸದಸ್ಯರು, ಭಕ್ತರು ಭಾಗವಹಿಸಿದ್ದರು.

Advertisement
Advertisement

ಪುತ್ತೂರು ಇತಿಹಾಸದಲ್ಲೇ ಪ್ರಥಮ ಬಾರಿಗೆ ಡಿ.ಜೆ ಹಾಗೂ ಸಿಡಿಮದ್ದು ರಹಿತ ಉತ್ಸವವು ಭವ್ಯ ಶೋಭಾಯಾತ್ರೆಯೊಂದಿಗೆ ಸಾಗಿ ನಾಡಿನ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಭಕ್ತರು ಪುತ್ತೂರು ದಸರಾ ಹತ್ತೂರಿಗೆ ಮಾದರಿ. ಶಿಸ್ತು ಮತ್ತು ಸಮಯಪಾಲನೆಯ ದಸರಾವೆಂದರೆ ಅದು ಪುತ್ತೂರು ದಸರಾ. ಮುಂದೆ ಪುತ್ತೂರಿನಲ್ಲಿ ನಡೆಯುವ ಧಾರ್ಮಿಕ ಉತ್ಸವಕ್ಕೆ ಈ ಬಾರಿಯ ಶಾರದ ಶೋಭಾಯಾತ್ರೆಯೇ ಸಾಕ್ಷಿ ಎಂದು ಮಾಧ್ಯಮದ ಮುಂದೆ ಭಕ್ತರು ಸಂತಸ ವ್ಯಕ್ತಪಡಿಸಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page