ನವದೆಹಲಿ: ಪಕ್ಷ ತೊರೆದವರು ಹೇಡಿಗಳು ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೇ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಲೆಳಿದಿದ್ದಾರೆ.
ಇತ್ತೀಚೆಗೆ ನಡೆದ ಚಹಾಕೂಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್, ಸವಲತ್ತುಗಳು, ಭದ್ರತೆಯ ಆಸೆಯಿಂದ ಅಥವಾ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐ ದಾಳಿಯ ಭಯದಿಂದ ಕೆಲವರು ಪಕ್ಷ ತೊರೆದರು. ಅಂತಹ ‘ಹೇಡಿ’ಗಳೆಲ್ಲಾ ಪಕ್ಷ ಬಿಟ್ಟು ಹೋದರು. ಈಗ ಪಕ್ಷದಲ್ಲಿ ಸಿಂಹಗಳು ಮಾತ್ರ ಉಳಿದುಕೊಂಡಿವೆ ಎಂದು ಹೇಳಿದ್ದರು. ಜ್ಯೋತಿರಾ ದಿತ್ಯ ಸಿಂಧಿಯಾ, ಗುಲಾಂನಬಿ ಹೆಸರು ಉಲ್ಲೇಖಿಸುತ್ತಾ ಈ ಹೇಳಿಕೆ ನೀಡಿದ್ದರು.
ಈ ವೇಳೆ ಮಧ್ಯ ಪ್ರವೇಶಿಸಿದ ಖರ್ಗೆ, ‘ಅವರೆಲ್ಲರೂ ನಿಮ್ಮ ಸ್ನೇಹಿತರಲ್ಲವೇ’ ಎಂದು ಕಾಲೆಳೆದರು. ಇದರಿಂದ ರಾಹುಲ್ ಮುಜುಗರಗೊಂಡರು ಎಂದು ಮೂಲಗಳು ಹೇಳಿವೆ.














