ಪಕ್ಷ ತೊರೆದಿರುವ ಸಂಸದ, ಶಾಸಕರಿಗೆ 15 ದಿನಗಳ ಗಡುವು! ಮಮತಾ ಬ್ಯಾನರ್ಜಿಯಿಂದ ಸ್ಫೋಟಕ ಹೇಳಿಕೆ!!

ಪಶ್ಚಿಮ ಬಂಗಾಳ : ಪಕ್ಷ ತೊರೆದಿರುವ ಸಂಸದರು ಮತ್ತು ಶಾಸಕರಿಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮರಳಿ ಪಕ್ಷಕ್ಕೆ ಸೇರ್ಪಡೆಯಾಗಲು 15 ದಿನಗಳ ಗಡುವು ನೀಡಿದ್ದಾರೆ.
ಉತ್ತರ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ನಡೆದ ಬೃಹತ್ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷ ತೊರೆದಿರುವ ಟಿಎಂಸಿ ಸಂಸದರು ಮತ್ತು ಶಾಸಕರು 15 ದಿನಗಳೊಳಗೆ ಮರಳಿದರೆ ಸ್ವಾಗತ, ಇಲ್ಲವಾದರೆ ಪಕ್ಷದಲ್ಲಿ ಅವರಿಗೆ ಯಾವುದೇ ಸ್ಥಾನವಿಲ್ಲ ಎಂದು ಎಚ್ಚರಿಸಿದರು.
“ನಮ್ಮ ಸಹಾಯದಿಂದ ಗೆದ್ದು ಬಂದ ಹಲವು ಶಾಸಕರು ಮತ್ತು ಸಂಸದರು ನಂಬಿಕೆ ದ್ರೋಹಿಗಳು, ಅಂತವರಿಗೆ ಪಕ್ಷದಲ್ಲಿ ಜಾಗವಿಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ನೀವೇ ನಿಜವಾದ ತೃಣಮೂಲ ಕಾರ್ಯಕರ್ತರು. ಪಕ್ಷ ತೊರೆದ ಶಾಸಕರು ಮತ್ತು ಸಂಸದರು 15 ದಿನಗಳ ಒಳಗೆ ಹಿಂತಿರುಗಿದರೆ ಸರಿ, ಇಲ್ಲದಿದ್ದರೆ ಅವರಿಗೆ ಪಕ್ಷದಲ್ಲಿ ಮತ್ತೆಂದೂ ಜಾಗವಿರುವುದಿಲ್ಲ,” ಎಂದು ಮಮತಾ ಸ್ಪಷ್ಟಪಡಿಸಿದರು.

Advertisement

ಇದೇ ವೇಳೆ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಹರಿದಾಯ್ದ ಅವರು, ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಾಗಿರು ವಷ್ಟು ದಿನ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುತ್ತದೆ ಎಂದು ಆರೋಪಿಸಿದರು. 1998ರಲ್ಲಿ ತಾವು ಶೂನ್ಯದಿಂದ ಪಕ್ಷವನ್ನು ಹೇಗೆ ಕಟ್ಟಿ ಬೆಳೆಸಿದ್ದರೋ, ಅದೇ ರೀತಿ ಮತ್ತೆ ಪಕ್ಷವನ್ನು ಬಲಪಡಿಸುವುದಾಗಿ ಮಮತಾ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ನಾಯಕರಲ್ಲ, ಬದಲಾಗಿ ತಳಮಟ್ಟದ ಸಾಮಾನ್ಯ ಕಾರ್ಯಕರ್ತರೇ ಪಕ್ಷದ ಜೀವಾಳ ಎಂದು ಅವರು ಪ್ರತಿಪಾದಿಸಿದರು.
ರಾಷ್ಟ್ರ ರಾಜಕಾರಣದಲ್ಲೂ ಟಿಎಂಸಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ತೃಣಮೂಲ ಕಾಂಗ್ರೆಸ್ ಇಲ್ಲದೆ ಇಂಡಿಯಾ ಮೈತ್ರಿಕೂಟ ಬಲಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ ವಿರುದ್ಧ ಹೋರಾಡಲು ಟಿಎಂಸಿಯನ್ನು ಬಲಪಡಿಸಿ, ಎಂದು ಕರೆ ನೀಡಿದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page