ನಾಳೆ ನವರಾತ್ರಿಯ ಮೂರನೇ ದಿನ! ತಾಯಿ ಚಂದ್ರಘಂಟಾ ಆರಾಧನೆಯ ಸುದಿನ! ಕೆಂಪು ಬಣ್ಣವೇ ನಾಳೆಗೆ ಮಂಗಳಕರ!!

“ಯಾ ದೇವೀ ಸರ್ವಭುತೇಷು ಮಾಂ ಚಂದ್ರಘಂಟಾ ರೂಪೇಣ ಸಂಸ್ಥಿತಾ, ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ”

Advertisement

ನಾಳೆ ನವರಾತ್ರಿ ಹಬ್ಬದ ಮೂರನೇ ದಿನ. ನಾಳೆಯ ಬಣ್ಣ ಕೆಂಪು. ತಾಯಿ ಚಂದ್ರಘಂಟಾರನ್ನು ಪೂಜಿಸುವ ಮಂಗಳ ದಿನ.

Advertisement
Advertisement

ದೇವಿ ಪಾರ್ವತಿಯು ಶಿವನನ್ನು ಪತಿಯಾಗಿ ಪಡೆಯಲು ನಾರದ ಮುನಿಯ ಸಲಹೆಯಂತೆ ಕಠಿಣ ತಪಸ್ಸು ಮಾಡುತ್ತಾಳೆ. ಆಕೆಯ ತಪಸ್ಸಿಗೆ ಮೆಚ್ಚಿ ಶಿವನು ಮದುವೆಗೆ ಒಪ್ಪಿಕೊಳ್ಳುತ್ತಾನೆ. ಶಿವನ ಮದುವೆಯ ಮೆರವಣಿಗೆಯು (ಭೂತ, ಪ್ರೇತ, ಗಣಗಳು, ಅಘೋರಿಗಳೊಂದಿಗೆ) ರಾಜ ಹಿಮವಂತನ ಅರಮನೆಗೆ ಬಂದಾಗ, ಶಿವನ ಭಯಾನಕ ರೂಪವನ್ನು ನೋಡಿ ಪಾರ್ವತಿಯ ಕುಟುಂಬದವರು ಮತ್ತು ತಾಯಿ ಮೇನಾವತಿ ಭಯಭೀತರಾಗಿ ಮೂರ್ಛೆ ಹೋಗುತ್ತಾರೆ. ಆಗ ತನ್ನ ಕುಟುಂಬದವರನ್ನು ಮತ್ತು ಪೋಷಕರನ್ನು ರಕ್ಷಿಸಲು ಹಾಗೂ ಶಿವನ ಉಗ್ರರೂಪವನ್ನು ಹದಗೊಳಿಸಲು ಪಾರ್ವತಿಯು ಚಂದ್ರಘಂಟಾ ದೇವಿಯ ರೌದ್ರ ಹಾಗೂ ದಿವ್ಯರೂಪವನ್ನು ತಾಳುತ್ತಾಳೆ. ತಾಯಿಯ ಈ ರೂಪ ಕಂಡು ಶಿವನು ಸುಂದರವಾದ ರಾಜಕುಮಾರನ ರೂಪವನ್ನು ತಾಳಿ, ಪಾರ್ವತಿಯೊಂದಿಗೆ ವಿವಾಹವಾಗುತ್ತಾನೆ.

ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಪೂಜಾ ಸ್ಥಳವನ್ನು ಗಂಗಾಜಲದಿಂದ ಶುದ್ಧ ಮಾಡಬೇಕು. ದೇವರ ಮುಂದೆ ದೀಪ ಹಚ್ಚಬೇಕು. ಪೂಜೆಯ ಆರಂಭದಲ್ಲಿ ಮೊದಲಿಗೆ ಕಲಶ ಇಟ್ಟು ದೇವರನ್ನು ಪೂಜಿಸಬೇಕು. ನಂತರ ಕೈಯಲ್ಲಿ ಅಕ್ಷತೆ ಮತ್ತು ಹೂವು ಹಿಡಿದು ಚಂದ್ರಘಂಟಾ ದೇವಿಯನ್ನು ಧ್ಯಾನಿಸಬೇಕು. ದೇವಿಗೆ ಕುಂಕುಮ, ಅಕ್ಷತೆ, ಗಂಧ ಮತ್ತು ಹೂವುಗಳನ್ನು ಅರ್ಪಿಸಿ. ದೇವಿಯ ಮೂಲ ಮಂತ್ರವನ್ನು ಭಕ್ತಿಯಿಂದ ಜಪಿಸಿ. ಕೊನೆಯಲ್ಲಿ ಚಂದ್ರಘಂಟಾ ದೇವಿಗೆ ಆರತಿ ಬೆಳಗಿ, ಕುಟುಂಬದ ಸುಖ-ಶಾಂತಿಗಾಗಿ ಪ್ರಾರ್ಥಿಸಬೇಕು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page