ಭಾರತೀಯ ಸೇನೆ ಕಾಶ್ಮೀರದಲ್ಲಿ ನಡೆಸಿದ ಎನ್ಕೌಂಟರ್ನಲ್ಲಿ ಲಷ್ಕರ್ ಕಮಾಂಡ್ ಹಶೀಮ್ ಮೂಸಾ ಹತ್ಯೆಯಾಗಿದ್ದು ಸುಳ್ಳು ಎಂದು ಬಿಂಬಿಸಲು ನಕಲಿ ವ್ಯಕ್ತಿಯೊಬ್ಬನನ್ನು ಪಾಕಿಸ್ತಾನ ಮಾಧ್ಯಮಗಳ ಮುಂದೆ ತಂದು ನಿಲ್ಲಿಸಿರುವುದು ಜಗಜ್ಜಾಹೀರಾಗಿದೆ.
ಪಾಕಿಸ್ತಾನ ಸೇನೆಯು ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಕಲಿ ವ್ಯಕ್ತಿಯೊಬ್ಬನನ್ನು ಹಾಜರು ಪಡಿಸಿ, ಆತನೇ ಮೊಹಮ್ಮದ್ ಆಸಿಫ್ ಎಂದಿತ್ತು. ಆದರೆ ಈ ನಾಟಕೀಯ ನಡೆ ಕೇಲವೇ ಸಮಯದಲ್ಲಿ ಬಯಲಾಗಿದ್ದು, ಪಾಕ್ ತೋರಿಸಿದ ವ್ಯಕ್ತಿಯ ದೇಹಚರ್ಯೆಗೂ ಮೂಸಾನ ದೇಹಕ್ಕೂ ತಾಳೆ ಆಗುತ್ತಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.














