ಪುತ್ತೂರು: ನೆಹರೂ ನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕರಾಗಿ ವಿವೇಕಾನಂದ ಶಿಶುಮಂದಿರದ ಶ್ರೀ ಕೃಷ್ಣಲೋಕ ಸಮಿತಿಯ ಗೌರವಾಧ್ಯಕ್ಷ ಹಾಗೂ ಇಂಜಿನಿಯರ್ ಪ್ರಸನ್ನ ದರ್ಬೆ ನೇಮಕಗೊಂಡಿದ್ದಾರೆ. ಕರ್ನಾಟಕ ಸರ್ಕಾರದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (KRDCL) ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಕೆ.ವಿ.ಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಸುಳ್ಯ) ಓದಿರುವ ಪ್ರಸನ್ನ ದರ್ಬೆ ಈ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ.
ಇನ್ನು 2018 ರಲ್ಲಿ ನಡೆದ ಶ್ರವಣ ಬೆಳಗೊಳ ಮಹಾಮಸ್ತಕಾಭಿಷೇಕದಲ್ಲಿ KRDCL ನಿಂದ ತಾಂತ್ರಿಕ ವಿಭಾಗದಲ್ಲಿ ನಿಯೋಜನೆಗೊಂಡು 10 ತಿಂಗಳುಗಳ ಕಾಲ ನಿರಂತರವಾಗಿ ಸ್ಥಳೀಯರ ಮನಗೆದ್ದು ಸುತ್ತಲಿನ ಗ್ರಾಮಪ್ರದೇಶವನ್ನು ಸಜ್ಜುಗೊಳಿಸಿ, ಮಹಾಮಸ್ತಕಾಭಿಷೇಕವನ್ನು ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿ ಯಶಸ್ವಿಗೊಳಿಸಿ ಅಂದಿನ ರಾಜ್ಯ ಸರಕಾರದಿಂದ ಮತ್ತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯವರಿಂದ ಪ್ರಶಂಸೆ ಗೆ ಪುರಸ್ಕೃತರಾಗಿದ್ದರು, ಸಮಾಜದ ಕೆಲಸಗಳಲ್ಲಿ ನಿಸ್ವಾರ್ಥತೆಯಿಂದ ಕಾರ್ಯ ನಿರ್ವಹಿಸಿ, ಕುಕ್ಕೆ ಸುಬ್ರಮಣ್ಯ ಮಾಸ್ಟರ್ ಪ್ಲಾನ್ ಇಂಜಿನಿಯರ್‌ರಾಗಿ ಕಾರ್ಯನಿರ್ವಹಿಸಿ ನಂತರ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ದ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಸರ್ಕಾರದಿಂದ ನೇಮಕಗೊಂಡಿದ್ದರು. ಇದೀಗ ವಿವೆಕಾನಂದ ಕಾಲೇಜಿನ ಸಂಚಾಲಕರಾಗಿ ಆಯ್ಕೆಗೊಂಡಿರುವ ಅವರಿಗೆ ಶುಭಾಶಯದ ಮಹಾಪೂರವೇ ಹರಿದುಬರುತ್ತಿದೆ.














