ಬಂಟ್ವಾಳ : ಬಿಳಿಯೂರಿನ ಕಳೆಂಜ ದೇಂತಡ್ಕ, ಪೆರ್ನೆಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶರನ್ನವರಾತ್ರಿ ಉತ್ಸವ ಒಕ್ಟೋಬರ್ 11 ರವಿವಾರದಿಂದ ಒ. 21 ಬುಧವಾರದವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಹಾಗೂ ಕೆಮ್ಮಿಂಜೆ ಡಾ. ಸುಜಯ್ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.


ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಳೆಂಜ ಗುತ್ತು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಟ್ರಸ್ಟ್ (ರಿ.)ನ ಆನುವಂಶಿಯ ಆಡಳಿತ ಮೊಕೆಸ್ತರರು ಹಾಗೂ, ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














