ಕುಮಾರಸ್ವಾಮಿಗೆ ದಲಿತರೆಂದರೆ ತೀವ್ರ ಅಸಹನೆ! ಹೊಸ ಬಾಂಬ್‌ ಸಿಡಿಸಿದ ಪ್ರಿಯಾಂಕ್‌ ಖರ್ಗೆ!!

ಎಚ್.ಡಿ. ಕುಮಾರಸ್ವಾಮಿ ಅವರಿಗೆ ದಲಿತರೆಂದರೆ ತೀವ್ರ ಅಸಹನೆ ಇದ್ದಂತಿದೆ. ಅದಕ್ಕೇ ನಾನು ಸೂಟು ಹಾಕುವುದು, ಇಂಗ್ಲಿಷ್‌ ಮಾತನಾಡುವುದು ಅವರಿಗೆ ಕಿರಿ ಕಿರಿ ಎನಿಸುತ್ತಿದೆ ಎಂದು ಗೃಹ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಕುಮಾರಸ್ವಾಮಿ ಅವರು ಸಿನಿಮಾ ಪ್ರೊಡ್ಯೂಸರ್ ಆಗಬಹುದು. ಜಾಗ್ವಾರ್ ಕಾರ್ ಖರೀದಿಸಬಹುದು. ರಿಯಲ್ ಎಸ್ಟೇಟ್ ನಡೆಸಬಹುದು. ಆದರೆ ದಲಿತರು ಮಾತ್ರ ಸೂಟು, ಬೂಟು ಹಾಕಿದರೆ ಅವರಿಗೆ ಅಸಹನೆ ಇದ್ದಂತಿದೆ. ನಮ್ಮ ಕುಟುಂಬದವರು ಕಷ್ಟಪಟ್ಟು ಸಿದ್ಧಾರ್ಥ ವಿಹಾರ ಟ್ರಸ್ಟ್ ಮೂಲಕ ಬುದ್ಧ ಮಂದಿರ ನಿರ್ಮಿಸಿದ್ದೇವೆ. ಅದಕ್ಕೂ ಕಿರುಕುಳ ನೀಡಲಾಗುತ್ತಿದೆʼ ಎಂದರು.

Advertisement

ನನಗೆ ಮೀಸಲು ಕ್ಷೇತ್ರ ತ್ಯಜಿಸಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕುಮಾರಸ್ವಾಮಿ ಅವರು ಸವಾಲು ಹಾಕಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ದಲಿತ ಸಮುದಾಯದ ನಾಯಕನನ್ನು ಗೆಲ್ಲಿಸುವ ಮನಸ್ಥಿತಿ ಸಮಾಜದಲ್ಲಿ ಇದೆಯೇ ಎಂದು ಪ್ರಶ್ನಿಸಿದರು.
ʼರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಲಿತರು ಎಂಬ ಕಾರಣಕ್ಕೆ ದೇವಸ್ಥಾನಗಳಲ್ಲಿ ಪ್ರವೇಶ ನೀಡಲು ಹಿಂಜರಿಯುತ್ತಾರೆ. ಹಿಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರವೇಶಿಸಿದ ದೇವಸ್ಥಾನವನ್ನು ಸ್ವಚ್ಛ ಮಾಡಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಸ್ವಚ್ಛ ಮಾಡಿದರು. ಇಂತಹ ಮನಸ್ಥಿತಿಯಲ್ಲಿ ದಲಿತರು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸಾಧ್ಯವೇ?ʼ, ಕುಮಾರಸ್ವಾಮಿ ಅವರು ಕಲಬುರಗಿ ಜಿಲ್ಲೆ ಅಥವಾ ಕರಾವಳಿಯಲ್ಲಿ ಸ್ಪರ್ಧಿಸಿ ಗೆಲ್ಲಲಿʼ ಎಂದು ಸವಾಲು ಹಾಕಿದರು.

Advertisement
Advertisement

ʼಇಲ್ಲಿಯವರೆಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತ್ರ ಮಾತನಾಡುತ್ತಾರೆ ಅಂದುಕೊಂಡಿದ್ದೆ. ನಾನು ಅವರಿಗೆ ಸರಿಸಾಟಿಯಿಲ್ಲ ಅಂದುಕೊಂಡಿದ್ದೆ. ನನ್ನ ಬಗ್ಗೆ ಟೀಕಿಸುವುದನ್ನು ನೋಡಿದರೆ ನಾನೂ ಅವರ ಸರಿಸಾಟಿಯಾಗಿದ್ದೇನೆ ಎಂದು ಅನಿಸುತ್ತಿದೆʼ ಎಂದರು. ಕಲಬುರಗಿಯಲ್ಲಿ ಉಗ್ರನ ಬಂಧನ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ʼಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎಷ್ಟೋ ಜನರು ಪಶ್ಚಿಮ ಬಂಗಾಳದಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವ ಮಾಹಿತಿ ಇದೆ. ಕಾಫಿ ತೋಟಗಳಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವಾಗ ಮಾಲೀಕರು ಪೂರ್ವಾಪರ ಯೋಚಿಸಬೇಕು ಎಂದರು. ಇದುವರೆಗೆ 1170 ಜನ ವಲಸಿಗರನ್ನು ಗಡಿಪಾರು ಮಾಡಲಾಗಿದೆ. ಎಷ್ಟೋ ಬಾರಿ ಆ ದೇಶದವರು ಇವರನ್ನು ತಮ್ಮ ಪ್ರಜೆಗಳೆಂದು ಒಪ್ಪಿಕೊಳ್ಳುವುದಿಲ್ಲʼ ಎಂದರು.
ಪರಪ್ಪನ ಅಗ್ರಹಾರದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಬೆಳಗಾವಿ ಜೈಲಿಗೆ ಸ್ಥಳಾಂತರಿಸಲು ಅಧಿಕಾರಿಗಳು ಸೂಕ್ತ ಅನುಮತಿ ಪಡೆದಿರಲಿಲ್ಲ. ಅದಕ್ಕಾಗಿ ವಾಪಸ್ ಬೆಂಗಳೂರು ಜೈಲಿಗೆ ಕರೆಸಿಕೊಳ್ಳಲಾಗಿದೆ. ಗೃಹಸಚಿವನಾದ ನಾನೇ ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಪ್ರಿಯಾಂಕ್ ಸ್ಪಷ್ಟಪಡಿಸಿದರು ಎಂದು ಮೂಲಗಳು ವರದಿಯಲ್ಲಿ ಹೇಳಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page