ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ʼಜೈಲರ್-2ʼ ಟ್ರೇಲರ್ ರಿಲೀಸ್ ಆಗಿದ್ದು, ಚಿತ್ರದ ಮೇಲಿನ ಹೈಪ್ ಮತ್ತಷ್ಟು ಹೆಚ್ಚಾಗಿದೆ. ಮಲ್ಟಿಸ್ಟಾರ್ಸ್ ಚಿತ್ರದಲ್ಲಿ ʼತಲೈವಾʼ ಮತ್ತೊಮ್ಮೆ ನಿವೃತ್ತ ಜೈಲರ್ ಆಗಿ ಅಬ್ಬರಿಸಲಿದ್ದಾರೆ. ಟ್ರೇಲರ್ನಲ್ಲಿ ಆಕ್ಷನ್ ದೃಶ್ಯಗಳು ಸಿನಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಈ ಸಲ ಡಿಫ್ರೆಂಟ್ ಹಾದಿಯನ್ನು ಆಯ್ದುಕೊಂಡಿದೆ.
ಸಾಮಾನ್ಯವಾಗಿ ರಜಿನಿಕಾಂತ್ ಅವರ ಸಿನಿಮಾಗಳಿಗೆ ಗ್ರ್ಯಾಂಡ್ ಆಗಿ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಆದರೆ ʼಜೈಲರ್ -2ʼ ವಿಚಾರದಲ್ಲಿ ಚಿತ್ರತಂಡ ಭಿನ್ನ ರೀತಿಯಲ್ಲಿ ಪ್ರಚಾರಕ್ಕೆ ಮುಂದಾಗಿದೆ. ʼಜೈಲರ್ -2ʼ ಚಿತ್ರ ಆಡಿಯೋ ಲಾಂಚ್ ಕಾರ್ಯಕ್ರಮದ ಬದಲು ಸಂದರ್ಶನದ ಮೂಲಕ ಚಿತ್ರತಂಡ ಪ್ರತಿ ಮನೆಮನೆಗೆ ಸಿನಿಮಾವನ್ನು ತಲುಪಿಸುವ ಪ್ರಯತ್ನಕ್ಕೆ ಮುಂದಾಗಿದೆ. ರಜಿನಿಕಾಂತ್ ಅವರ ಮೂರು ಗಂಟೆಗಳ ವಿಶೇಷ ಸಂದರ್ಶನ ಟಿವಿಯಲ್ಲಿ ಪ್ರಸಾರವಾಗಲಿದೆ. ಆ ಮೂಲಕ ʼಜೈಲರ್ -2ʼ ಪ್ರಮೋಷನ್ಸ್ ನಡೆಯಲಿದೆ. ಅದ್ದೂರಿ ಆಡಿಯೋ ಬಿಡುಗಡೆ ಸಮಾರಂಭದ ಬದಲಿಗೆ, ಚಿತ್ರತಂಡವು ಸರಳವಾದ ಆಲ್ಬಮ್ ಬಿಡುಗಡೆ ಕಾರ್ಯಕ್ರಮವನ್ನು ಆಯ್ದುಕೊಂಡಿದೆ ಎಂದು ಜಾಲತಾಣ ಮೂಲಗಳು ಹೇಳಿವೆ.
ಇದರ ಜೊತೆಗೆ, ಚಿತ್ರವು ಬಿಡುಗಡೆಯಾಗುವ ಕೆಲವೇ ದಿನಗಳ ಮುನ್ನ, ಪ್ರೈಮ್ಟೈಮ್ ಸಮಯದಲ್ಲಿ ರಜಿನಿಕಾಂತ್ ಅವರೊಂದಿಗೆ ಮೂರು ಗಂಟೆಗಳ ವಿಶೇಷ ದೂರದರ್ಶನ ಸಂದರ್ಶನವನ್ನೂ ಏರ್ಪಡಿಸಲಾಗಿದೆ. ಈ ವಿಶೇಷ ಸಂದರ್ಶನವು ಅಕ್ಟೋಬರ್ 11 ರಂದು ನಿಗದಿಯಾಗಿದ್ದು, ಸಂಜೆ 6:30 ರಿಂದ ರಾತ್ರಿ 9:30 ರವರೆಗೆ ʼಸನ್ ಟಿವಿʼಯಲ್ಲಿ ಪ್ರಸಾರವಾಗಲಿದೆ. ಅಕ್ಟೋಬರ್ 15 ರಂದು ‘ಜೈಲರ್ 2’ ವಿಶ್ವಾದ್ಯಂತ ಬಿಡುಗಡೆಯಾಗುವ ನಾಲ್ಕು ದಿನಗಳ ಮುನ್ನ ನಡೆಯಲಿರುವ ಈ ಮೂರು ಗಂಟೆಗಳ ಪ್ರೈಮ್ಟೈಮ್ ದೂರದರ್ಶನ ಕಾರ್ಯಕ್ರಮವು, ಚಿತ್ರದ ಪ್ರಮುಖ ಪ್ರಚಾರ ಕಾರ್ಯಕ್ರಮಗಳಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಲಾಗಿದೆ. ರಜಿನಿಕಾಂತ್ ಅವರ ಚಿತ್ರಗಳ ಆಡಿಯೋ ಬಿಡುಗಡೆ ಸಮಾರಂಭಗಳ ಅದ್ಧೂರಿಯಾಗಿ ನಡೆಯುತ್ತಿದ್ದವು. ರಜಿನಿಕಾಂತ್ ಅವರ ಮಾತುಗಳು, ಅನಿರುದ್ಧ್ ಅವರ ಪವರ್ ಪರ್ಫಾರ್ಮೆನ್ಸ್ ಗಮನ ಪ್ರಚಾರ ಕಾರ್ಯಕ್ರಮಗಳಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಲಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ರಜನಿಕಾಂತ್ ಜತೆ ಮೋಹನ್ಲಾಲ್, ಶಿವ ರಾಜ್ಕುಮಾರ್, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್ಜೆ ಸೂರ್ಯ, ಸೂರಜ್ ವೆಂಜರಮೂಡು ಮತ್ತು ರಮ್ಯಾ ಕೃಷ್ಣನ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ನಟ ವಿಜಯ್ ಸೇತುಪತಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಅಕ್ಟೋಬರ್ 15 ರಂದು ಚಿತ್ರ ರಿಲೀಸ್ ಆಗಲಿದೆ.














