ಬಾಲಿವುಡ್ನ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಎರಡನೇ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ದಂಪತಿ, ‘ಪ್ರೀತಿ ಮತ್ತು ಸಮೃದ್ಧಿಯ ದೇವಿ ಪಡುಕೋಣೆ ಸಿಂಗ್’ ಎಂದು ಬರೆದುಕೊಂಡಿದ್ದಾರೆ.
ದಸರಾ ಸಮಯದಲ್ಲಿ ಮಗಳಿಗೆ ನಾಮಕರಣಮಾಡಿ ‘ದೇವಿ’ ಎಂದೇ ಹೆಸರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಣವೀರ್ ಮತ್ತು ದೀಪಿಕಾ ಜೊತೆ ಮೊದಲ ಮಗಳು ದುವಾ ಕೂಡ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ. ದುವಾ, ತಂಗಿ ದೇವಿಗೆ ಪ್ರೀತಿಯಿಂದ ಮುತ್ತಿಡುವುದನ್ನು ಕಾಣಬಹುದು. ಚಿನ್ನದ ಬಣ್ಣದ ಸಾಂಪ್ರದಾಯಿಕ ಉಡುಪುಧರಿಸಿದ್ದ ಈ ಕುಟುಂಬದ ಚಿತ್ರಕ್ಕೆ ಅಭಿಮಾನಿಗಳು ಅಭಿನಂದಿಸಿದ್ದಾರೆ.
ಸೆಪ್ಟೆಂಬರ್ 19 ರಂದು ಈ ಜೋಡಿಗೆ ಎರಡನೇ ಮಗಳು ಹುಟ್ಟಿದ್ದಳು. 2024ರ ಸೆ.8ರಂದು ಮೊದಲ ಮಗಳು ದುವಾ ಜನಿಸಿದ್ದಳು. ಎರಡನೇ ಮಗುವನ್ನು ಸ್ವಾಗತಿಸುವ ವೇಳೆ, ‘ಎರಡು ವರ್ಷಗಳ ಬಳಿಕ ಎರಡನೇ ಮಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ’ ಎಂದು ದಂಪತಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.














