ಮೆಣಸಿನಕಾಯಿ ಬೆಳೆಗೆ ರಚಿತಾ ರಾಮ್ – ರಶ್ಮಿಕಾ ಮಂದಣ್ಣ ಕಾವಲು! ಗದ್ದೆಗೆ ದೃಷ್ಟಿ ತಾಗದಿರಲು ಫಸ್ಟ್‌ ಕ್ಲಾಸ್‌ ಐಡಿಯಾ!!

ಮುಳಗುಂದ: ತೀವ್ರ ಮಳೆ ಕೊರತೆ ನಡುವೆಯೂ ಬೆಳೆಸಿದ ಬೆಳೆಗೆ ದೃಷ್ಟಿ ತಾಗದಿರಲೆಂದು ರೈತ ಮಹಿಳೆಯರು ಮಾಡಿರುವ ಉಪಾಯ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ನಿರ್ಮಲಾ ವಿಭೂತಿ ಮತ್ತು ಅವರ ತಾಯಿ ಮಹಾದೇವಿ ವಿಭೂತಿ ಅವರು 2.5 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಬೆಳೆಯುಕಾಯಿಕಟ್ಟುವ ಹಂತ ತಲುಪಿದೆ. ಈ ಬೆಳೆಗೆಯಾರ ದೃಷ್ಟಿ ತಾಗದಿರಲೆಂದು, ಇವರು ರಚಿತಾ ರಾಮ್ ಹಾಗೂ ರಶ್ಮಿಕಾ ಮಂದಣ್ಣ ಅವರ ಮೊರೆಹೋಗಿದ್ದಾರೆ.

Advertisement

ಜಮೀನುಗಳಲ್ಲಿ ಸಾಮಾನ್ಯವಾಗಿ ಪ್ಲಾಸ್ಟಿಕ್ ಗೊಂಬೆಗಳು, ಕಪ್ಪು ಮಡಿಕೆಗಳು ಅಥವಾ ಹಳೆಯ ಚಪ್ಪಲಿಗಳನ್ನು ಇಡುವ ಉಪಾಯ ಮಾಡುತ್ತಾರೆ. ಆದರೆ, ತಾಯಿ–ಮಗಳು, ಚಿತ್ರ ನಟಿಯರಾದ ರಚಿತಾ ರಾಮ್ ಮತ್ತು ರಶ್ಮಿಕಾ ಮಂದಣ್ಣ ಅವರ ಭಾವಚಿತ್ರಗಳನ್ನು ಅಳವಡಿಸಿದ್ದಾರೆ.
ಬೆಳೆಯ ನಡುವೆ ಕಾಣಿಸುವ ನಟಿಯರ ಫೋಟೊ, ಎಲ್ಲರ ಗಮನ ಸೆಳೆಯುತ್ತಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page